ಮೇರಿ ಕ್ಯೂರಿ | |
---|---|
Born | Maria Salomea Skłodowska ೭ ನವೆಂಬರ್ ೧೮೬೭ |
Died | 4 July 1934 Passy, Haute-Savoie, France | (aged 66)
Cause of death | Aplastic anemia |
Citizenship | Poland (by birth) France (by marriage) |
Spouse | Pierre Curie (1859–1906) m. 1895 |
Children | Irène Joliot-Curie (1897–1956) Ève Curie (1904–2007) |
ವೈಜ್ಞಾನಿಕ ವೃತ್ತಿ | |
ಕಾರ್ಯಕ್ಷೇತ್ರ | ಭೌತಶಾಸ್ತ್ರ, ರಸಾಯನ ಶಾಸ್ತ್ರ |
ಸಂಸ್ಥೆಗಳು | University of Paris |
ಅಭ್ಯಸಿಸಿದ ವಿದ್ಯಾಪೀಠ | University of Paris ESPCI |
ಡಾಕ್ಟರೇಟ್ ಸಲಹೆಗಾರರು | Gabriel Lippmann |
ಡಾಕ್ಟರೇಟ್ ವಿದ್ಯಾರ್ಥಿಗಳು | |
ಪ್ರಸಿದ್ಧಿಗೆ ಕಾರಣ | |
ಗಮನಾರ್ಹ ಪ್ರಶಸ್ತಿಗಳು |
|
Signature | |
Notes | |
She is the only person to win a Nobel Prize in two different sciences. |
ಮೇರಿ ಕ್ಯೂರಿ (Maria Salomea Skłodowska-Curie) ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರೆ ಕ್ಯೂರಿಯೊಂದಿಗೆ ವಿವಾಹವಾದ ನಂತರ ಇವರ ಹೆಸರು ಮೇರಿ ಕ್ಯೂರಿ ಎಂದಾಯಿತು.[೨]
ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು, ಪ್ರೌಢಶಾಲೆ ಯಲ್ಲೇ ಚಿನ್ನದ ಪದಕವನ್ನ ಗಳಿಸಿದ್ದರು. ೧೮೯೧ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದರು. ಅಲ್ಲಿನ ಸೌಖನ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು. ಅಲ್ಲೇ ಇವರಿಗೆ ಪಿಯರಿ ಕ್ಯೂರಿಯ ಪರಿಚಯವಾಗಿದ್ದು. ವಿವಾಹದ ನಂತರ ಇಬ್ಬರೂ ಜತೆಗೂಡಿ ಸಂಶೋಧನೆಯನ್ನ ಕೈಗೊಂಡರು.[೩]
ಸಾಮಾನ್ಯ ರೂಪದಲ್ಲಿ ಸಿಗುವಂತ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಇವರು ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನ ಕಂಡುಹಿಡಿದರು. ೧೯೦೩ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಲು ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನ ಹಂಚಿಕೊಂಡರು. ೧೯೧೧ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರದು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ.
೧೯೩೪ ರ ಜುಲೈ ೪ ರಂದು ಫ್ರಾನ್ಸ್ನಲ್ಲಿ ವಿಕಿರಣದ ರಕ್ತ ಕ್ಯಾನ್ಸರ್ನಿಂದ ವಿಧಿವಶರಾದರು.
<ref>
tag; no text was provided for refs named nobelprize