ವಿಟ್ನಿ ಹ್ಯೂಸ್ಟನ್

'ಅಮೆರಿಕದ ಪಾಪ್ ಸಂಗೀತ ಪದ್ಧತಿ'ಯಲ್ಲಿ ತನ್ನ ಅದ್ಭುತ ಕಂಠಸಿರಿಯಿಂದ ಹಾಡುತ್ತಾ ಮುಗಿಲೆತ್ತರಕ್ಕೆ ಏರಿದ ಅತ್ಯಂತ ಜನಪ್ರಿಯ ಗಾಯಕಿಯಾಗಿ ಗುರುತಿಸಲ್ಪಟ್ಟಿರುವ ವಿಟ್ನಿ ಹ್ಯೂಸ್ಟನ್, ೮೦ ರ ದಶಕದಲ್ಲಿ 'ಐವಿಲ್ ಆಲ್ವೇಸ್ ಲವ್ ಯು' ಎಂಬ ಗೀತೆಯಿಂದ ಜನಪ್ರಿಯತೆಯ ಶಿಖರವನ್ನೇರಿದರು. ಅಂತಹದೇ ಹಲವಾರು ಗೀತೆಗಳನ್ನು ಹಾಡಿ ಜಗತ್ತಿನ ಎಲ್ಲಾ ವಯೋಮಾನದ ಸಂಗೀತ ರಸಿಕರ ಕಣ್ಮಣಿಯಾದರು. ಅತ್ಯಂತ ಹೆಚ್ಚಿನ ಪ್ರಶಸ್ತಿವಿಜೇತೆಯೆಂಬ ತಲೆಗರಿಯನ್ನು ತಮ್ಮದಾಗಿರಿಸಿಕೊಂಡಿದ್ದರು.[೧]

ಜನನ

ಅಮೆರಿಕದ 'ನ್ಯೂಜರ್ಸಿ'ಯ ನೇವಾರ್ಕ್ ನಗರದಲ್ಲಿ ೧೯೬೩ ರ, ಆಗಸ್ಟ್, ೯ ರಂದು, ಜನಿಸಿದ, 'ವಿಟ್ನಿ ಹ್ಯೂಸ್ಟನ್' ಬಾಲ್ಯದ ದಿನಗಳಲ್ಲಿ 'ಚರ್ಚ್' ಗಳಲ್ಲಿ ಹಾಡಲು ಆರಂಭಿಸಿ, ಬಳಿಕ ಅಲ್ಲಿನ 'ನೈಟ್ ಕ್ಲಬ್' ಗಳಲ್ಲಿ ಹಾಡಿ ತಮ್ಮ ಪ್ರತಿಭೆಯಿಂದ ಹೆಸರುಗಳಿಸಿದರು. 'ಗಾಸ್ಪೆಲ್ ಗಾಯಕ', ಕಿಸ್ಸಿ ಹ್ಯೂಸ್ಟನ್ ಈಕೆಯ ತಂದೆ. ೧೯೮೫ ರಲ್ಲಿ 'ಶ್ರೇಷ್ಠ ಮಹಿಳಾ ಪಾಪ್ ಸಂಗೀತ ಗಾಯಕಿ'ಗೆ ದೊರಕುವ 'ಮೊದಲ ಆಲ್ಬಮ್' ಬಿಡುಗಡೆಗೊಂಡಿತು. ಅವರಿಗೆ 'ಮೊದಲ ಗ್ರ್ಯಾಮ್ಮಿ ಅವಾರ್ಡ್' ದೊರೆತದ್ದು, 'ಸೇವಿಂಗ್ ಆಲ್ ಮೈ ಲವ್ ಫಾರ್ ಯು' ಎಂಬ ನಂಬರ್ ಗೆ; ಇದರ ತರುವಾಯ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ಹ್ಯೂಸ್ಟನ್, ಸ್ವಲ್ಪ ಸಮಯ 'ರೂಪದರ್ಶಿ'ಯಾಗಿ ಕೂಡ ಕೆಲಸ ಮಾಡಿದ್ದರು. ನಂತರ, ಖ್ಯಾತ ಸಂಗೀತ ನಿರ್ದೇಶಕ 'ಕ್ಲೈವ್‌ ಡೇವಿಸ್‌]]]]' ಅವರು ಆಕೆಯನ್ನು ಗುರುತಿಸಿ ಸ್ಥಳದಲ್ಲೇ ಆಕೆಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದರು.

ಮನೆಯ ವಾತಾವರಣ

'ವಿಟ್ನಿ ಹ್ಯೂಸ್ಟನ್' ಮದುವೆಯಾದದ್ದು, ಬಾಬಿ ಬ್ರೌನ್ ರವರ ಜೊತೆಯಲ್ಲಿ. ಆದರೆ ಗಂಡಹೆಂಡಿರ ಮಧ್ಯೆ ಸಾಮರಸ್ಯವಿಲ್ಲದೆ ಸನ್ ೨೦೦೭ ರಲ್ಲಿ ವಿವಾಹ ವಿಚ್ಛೇದನವಾಗಿತ್ತು. ೧೯೮೦ ರಿಂದ ೯೦ ರ ದಶಕದಲ್ಲಿ ಅತಿ ಹೆಚ್ಚು ಹೆಸರುಮಾಡಿದ ಗಾಯಕಿಯಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಅತಿ ಉನ್ನತ ಶಿಖರವನ್ನೇರಿದ್ದರು. 'ವಿಟ್ನಿ ಹ್ಯೂಸ್ಟನ್' ರವರು ಹಾಡಿದ ಅತ್ಯಂತ ಹೆಸರಾಂತ ಹಾಡುಗಳು

  • 'ಹವ್ ವಿಲ್ ಐ ನೊ'
  • 'ದ ಗ್ರೇಟೆಸ್ಟ್ ಲವ್ ಆಫ್ ಆಲ್'
  • 'ಐ ವಾನ್ನ ಡಾನ್ಸ್ ವಿತ್ ಸಮ್ ಬಾಡಿ'
  • 'ಸೇವಿಂಗ್ ಆಲ್ ಮೈ ಲವ್ ಫಾರ್ ಯು'

ನಂತಹ ಗೀತೆಗಳು ಜನರನ್ನು ಹುಚ್ಚೆಬ್ಬಿಸಿದ್ದವು.

ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು

  • 'ಬಾಡಿ ಗಾರ್ಡ್' ಎಂಬ 'ಬ್ಲಾಕ್ ಬಸ್ಟರ್' ಚಲನಚಿತ್ರದಲ್ಲಿ ಕೆವಿನ್ ಕಾಸ್ಟನರ್ ಎಂಬ ಹೆಸರಾಂತ ನಾಯಕನ ಜೊತೆ ಅಭಿನಯಿಸಿದ್ದರು.
  • ’ಸ್ಪಾರ್ಕಲ್' ಮತ್ತೊಂದು ಇತ್ತೀಚಿನ ಹೊಸ ಚಲನಚಿತ್ರ,ದಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಿದ್ದರು.

ವೈಯಕ್ತಿಕ ಜೀವನ

ಡ್ರಗ್ ಆರೋಪಕ್ಕೆ ಬಲಿಯಾಗುವ ಮೊದಲೇ ಇತ್ತೀಚೆಗೆ ಅವರ ಜನಪ್ರಿಯತೆ ಸ್ವಲ್ಪ ಕಡಿಮೆಯಾಗಿತ್ತು. ಆದರೂ ದೀರ್ಘ ಕಾಲ 'ಪಾಪ್ ಸಂಗೀತದ ಜಗತ್ತಿನ ರಾಣಿ' ಎಂಬ ಬಿರುದನ್ನು ಉಳಿಸಿಕೊಂಡ ಖ್ಯಾತಿಗೆ ಪಾತ್ರರಾಗಿದ್ದರು.

ಸಂಗೀತದ ಆಲ್ಬಂ ಗಳ ಪಟ್ಟಿ, ಹಾಗೂ ದೊರೆತ ಪ್ರಶಸ್ತಿಗಳು

  • ೧೯೮೫ ರಲ್ಲಿ ಆಕೆಯ ಚೊಚ್ಚಲ ಆಲ್ಬಮ್‌ 'ವಿಟ್ನಿ ಹೂಸ್ಟನ್‌' ಅತ್ಯುತ್ತಮ ಮಾರಾಟದ ಆಲ್ಬಮ್‌ ಎನಿಸಿತು.
  • ೧೯೮೭ ರಲ್ಲಿ ಆಕೆಯ ಎರಡನೆ ಸ್ಟುಡಿಯೊ ಆಲ್ಬಮ್‌ ೨೦೦ ಆಲ್ಬಮ್‌ಗಳ ಪೈಕಿ ಪ್ರಥಮ ಸ್ಥಾನಿಯಾಯಿತು.
  • ಹ್ಯೂಸ್ಟನ್‌ ಅತಿಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಕಲಾವಿದೆಯೆಂದು 'ಗಿನ್ನೆಸ್‌ ವಿಶ್ವ ದಾಖಲೆಗಳ ಪುಸ್ತಕ' ಗುರುತಿಸಿದೆ.
  • ಎರಡು ಎಮ್ಮಿ, ಪ್ರಶಸ್ತಿ ವಿಜೇತೆ.
  • ಆರು ಗ್ರ್ಯಾಮಿ, ಪ್ರಶಸ್ತಿ ವಿಜೇತೆ.
  • ೩೦ ಬಿಲ್‌ಬೋರ್ಡ್‌ ಮ್ಯೂಸಿಕ್‌ ಪ್ರಶಸ್ತಿ ವಿಜೇತೆ.
  • ೨೨ ಅಮೆರಿಕನ್‌ ಮ್ಯೂಸಿಕ್‌ ಪ್ರಶಸ್ತಿ.
  • ೪೧೫ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. (ಒಟ್ಟಾರೆ)

'೫೪ ನೆಯ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭ'ಕ್ಕೆ ಸಜ್ಜಾಗುತ್ತಿದ್ದರು

'ಲಾಸ್‌ ಏಂಜಲಿಸ್‌' ನಲ್ಲಿ ೫೪ ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಮುಂಚಿತವಾಗಿ ಹ್ಯೂಸ್ಟನ್‌ ರವರಿಗೆ ಸಾವು ಸಂಭವಿಸಿದೆ. ಹ್ಯೂಸ್ಟನ್‌ ಅವರ ವೃತ್ತಿಜೀವನ ವೇಳೆ ಅವರ '೧೭ ಕೋಟಿಗೂ ಅಧಿಕ ಮೊತ್ತದ ಅಲ್ಬಮ್‌ ಗಳು' ಹಾಗೂ 'ವಿಡಿಯೋಗಳು ಮಾರಾಟ'ವಾಗಿರುವುದಾಗಿ ಅವರ 'ಅಧಿಕೃತ ವೆಬ್‌ಸೈಟ್‌' ತಿಳಿಸಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಅವರು 'ಮಾದಕ ದ್ರವ್ಯ ವ್ಯಸನ'ಕ್ಕೆ ತುತ್ತಾಗಿದ್ದರು.

ನಿಧನ

'ಲಾಸ್‌ ಏಂಜಲಿಸ್‌' ಗ್ರ್ಯಾಮಿ ಪ್ರಶಸ್ತಿ ಸಹಿತ ಗರಿಷ್ಠ ಸಂಖ್ಯೆ ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆ'ಯನ್ನು ಹೊಂದಿದ್ದು 'ಜೀವಂತ ದಂತಕತೆ'ಯೆನಿಸಿದ್ದ ಖ್ಯಾತ ಗಾಯಕಿ-ನಟಿ, ೮೦ ರ ದಶಕದಲ್ಲಿ ಪಾಪ್‌ ಸಂಗೀತಪ್ರೇಮಿಗಳ ಹೃದಯಸಾಮ್ರಾಜ್ಞಿಯಾಗಿದ್ದ ವಿಟ್ನಿ ಹ್ಯೂಸ್ಟನ್ರವರು, ಇಲ್ಲಿನ ಸುಪ್ರಸಿದ್ಧ ಹೋಟೆಲ್ ವೊಂದರಲ್ಲಿ ನಿಧನರಾದರು. ಶನಿವಾರ ಮಧ್ಯಾನ್ಹ ೩-೫೫ ಕ್ಕೆ ಮೃತಪಟ್ಟರೆಂದ ಮೀಡಿಯಾಗಳು ಸುದ್ದಿಯನ್ನು ಬಿತ್ತರಿಸಿದವು. ಆಕೆಯ ಪ್ರತಿನಿಧಿ ತಕ್ಷಣವೇ ವೈದ್ಯರನ್ನು ಕರೆಸಿ ತಪಾಸಣೆಯನ್ನು ತ್ವರಿತಗೊಳಿಸಿದಾಗ್ಯೂ ಕೊನೆಯುಸಿರೆಳೆದಿದ್ದರು. ಡ್ರಗ್ ಬಳಕೆ,ಮತ್ತು ವೈಯಕ್ತಿಯ ಜೀವನದಲ್ಲಿನ ತೊಂದರೆಗಳು ಅವರನ್ನು ವಿವಾದಗಳಿಗೆ ಬಲಿಮಾಡಿದ್ದವು. 'ಹ್ಯೂಸ್ಟನ್‌' ಅವರ ಅಂಗರಕ್ಷಕ ಆಕೆಯ ಶವವನ್ನು ಪತ್ತೆ ಮಾಡಿದರೆಂದು ಪಾಪ್‌ ತಾರೆಯೊಂದಿಗೆ ಡೇಟಿಂಗ್‌ ನಡೆಸುತ್ತಿದ್ದ ಹಿಪ್‌-ಹಾಪ್‌ ಕಲಾವಿದ, ರೇ ಜೇ ಅವರ ಪ್ರಚಾರಕಿ 'ಕೋರ್ಟ್ನಿ ಬಾರ್ನೆಸ್‌' ಹೇಳಿದರು.

ಉಲ್ಲೇಖ

  1. http://www.imdb.com/name/nm0001365/bio?mode=desktop&ref_=m_ft_dsk