ಸಂಸತ್ ಸದಸ್ಯ (ಸಂಸದ)

Legislature
This series is part of the Politics series
Politics Portal · edit

ಓರ್ವ ಸಂಸತ್ ಸದಸ್ಯ ಎಂದರೆ ಸಂಸತ್ತಿನ ಮತದಾರರ ಪ್ರತಿನಿಧಿಯಾಗಿರುತ್ತಾನೆ. ಹಲವಾರು ದೇಶಗಳಲ್ಲಿ ಈ ಪದವು ವಿಶೇಷವಾಗಿ ಕೆಳಮನೆ ಸದಸ್ಯರಿಗೆ ಮಾತ್ರ ಬಳಸಲಾಗುತ್ತದೆ;ಮೇಲ್ಮನೆಗಳು ಮಾತ್ರ ವಿಶೇಷ ಶೀರ್ಷಿಕೆಯನ್ನು ಅಥವಾ ಹೆಸರನ್ನು ಹೊಂದಿರುತ್ತವೆ,ಉದಾಹರಣೆಗೆ ಸೆನೆಟ್ ಮತ್ತು ತನ್ನ ಸದಸ್ಯರಿಗೆ ವಿಶೇಷವಾಗಿ ಸೆನೇಟರ್ಸ್ ಎಂದು ಹೇಳಲಾಗುತ್ತದೆ. ಸಂಸತ್ತಿನ ಸದಸ್ಯರು ತಮ್ಮದೇ ಆದ ರಾಜಕೀಯ ಪಕ್ಷದ ಸದಸ್ಯರೊಂದಿಗೆ ಸಂಸದೀಯ ಪಕ್ಷಗಳನ್ನು ರಚಿಸುತ್ತಾರೆ. ಸಂಸತ್ತಿನ ಸದಸ್ಯ ಎಂಬ ಪದವು ಸಂಕ್ಷಿಪ್ತಗೊಳಿಸಿ ಮಾಧ್ಯಮದಲ್ಲಿ"MP"ಎಂದು ಮೊದಲೆರಡು ಅಕ್ಷರಗಳನ್ನು ಬಳಸಲಾಗುತ್ತದೆ.

ವೆಸ್ಟ್ ಮಿನಿಸ್ಟರ್ ಪದ್ದತಿ

ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿ,"ಸಂಸತ್ತಿನ ಸದಸ್ಯ "ಎಂಬ ಪದವು ಹೌಸ್ ಆಫ್ ರಿಪ್ರಜಂಟೇಟಿವ್ಸ್ ಗೆ ಸಂಬಂಧಿಸಿದೆ.ಅಂದರೆ ಕಾಮನ್ ವೆಲ್ತ್ ಸಂಸತ್ತಿನ ಕೆಳಮನೆ ಸದಸ್ಯರು ಎನ್ನಲಾಗುತ್ತದೆ. ಸದಸ್ಯ ಎನ್ನುವುದನ್ನು"MP"ಎಂದು ಅವರುಗಳ ಹೆಸರಿನ ನಂತರ ಸೂಚಿಸಲಾಗುತ್ತದೆ.ಈ ಮೊದಲು ಇದನ್ನು "MHR"ಎಂದು ಹೇಳಲಾಗುತಿತ್ತು. ಕಾಮನ್ ವೆಲ್ತನ ಮೇಲ್ಮನೆ, ಸೆನೆಟ್ ಸದಸ್ಯರಿಗೆ "ಸೆನೆಟರ್ಸ್ "ಎಂದೂ ಕರೆಯಲಾಗುತ್ತದೆ.

ಆದರೆ ವಿಕ್ಟೊರಿಯಾದಲ್ಲಿ ವಿಧಾನ ಸಭೆ ಸದಸ್ಯರಿಗೆ(ಕೆಳಮನೆ)"MP"ಎಂದು ಹೇಳಿದರೆ(ನೇಮಕದ ನಂತರ) ವಿಧಾನ ಪರಿಷತ್ತು(ಮೇಲ್ಮನೆ)ಸದಸ್ಯರಿಗೆ "MLC"ಎಂದು ಹೇಳಲಾಗುತ್ತದೆ.

ಬಾಂಗ್ಲಾದೇಶ

ಬಾಂಗ್ಲಾದೇಶದಲ್ಲಿ ಜತಿಯೊ ಜೊಗ್ರಶಾಲಾದ ಸದಸ್ಯರಿಗಾಗಿ ಅಥವಾ ನ್ಯಾಶನಲ್ ಅಸೆಂಬ್ಲಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಲಾಗುತ್ತದೆ,ಇಂಗ್ಲಿಷ್ ಮೂಲದಲ್ಲಿ ಇವರನ್ನು ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಎನ್ನಲಾಗುತ್ತದೆ. ಈ ಶಾಸನ ಸಭೆಯಲ್ಲಿ 345 ಸ್ಥಾನಗಳಿವೆ,ಇದರಲ್ಲಿ 45ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಕೆನಡಾ

ಕೆನಡಾದಲ್ಲಿ,ಕೆನಡಾ ಸಂಸತ್ತು(ಪಾರ್ಲಿಮೆಂಟ್ ಆಫ್ ಕೆನಡಾ ) ಮೇಲ್ಮನೆ,ದಿ ಸೆನೆಟ್ ಆಫ್ ಕೆನಡಾ,ದಿ ಕೆನಡಿಯನ್ ಹೌಸ್ ಆಫ್ ಕಾಮನ್ಸ,ಆದರೆ ಕೆಳಮನೆಯ ಸದಸ್ಯರನ್ನು ಮಾತ್ರ ಸಂಸತ್ ಸದಸ್ಯರು ಅಥವಾ ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಎಂದು ಸಾಮಾನ್ಯವಾಗಿ French: députéಹೇಳಲಾಗುತ್ತದೆ. ಅಲ್ಲಿ ಒಟ್ಟು ಪಾಪ್ ಸೆನೆಟ್ ನಲ್ಲಿ 105 ಸ್ಥಾನಗಳಿದ್ದರೆ,ಹೌಸ್ ಆಫ್ ಕಾಮನ್ಸ್ ನಲ್ಲಿ 308 [೧] ಸ್ಥಾನಗಳಿವೆ.

ಭಾರತ

ಭಾರತದಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ (ಸಂಸದ)ಎಂದರೆ ಸಂಸತ್ತಿನ ಎಲ್ಲಾ ಸದಸ್ಯರನ್ನು ಸಂಸದರೆಂದೇ ಕರೆಯಲಾಗುತ್ತದೆ.ಅವರು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿರಲಿ ಅವರೆಲ್ಲರೂ ಭಾರತದ ಸಂಸತ್ ಸದಸ್ಯ ರೆಂದೇ ಪರಿಗಣಿತರಾಗುತ್ತಾರೆ.

ಲೋಕಸಭೆಯ ಸದಸ್ಯರನ್ನು ಭಾರತದ ರಾಜ್ಯಗಳ ಮತ್ತು ಕೇಂದ್ರಾಳಿತದ ಪ್ರದೇಶದಿಂದ ಆಯಾ ಮತ ಕ್ಷೇತ್ರಗಳ ಮೂಲಕ ನೇರವಾಗಿ ಆಯ್ಕೆ ಮಾಡಲಾಗುತ್ತದೆ.ಅದರಂತೆ ರಾಜ್ಯ ಸಭಾ ಸದಸ್ಯರನ್ನು ಪರೋಕ್ಷವಾಗಿ ರಾಜ್ಯ ವಿಧಾನ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಂದು ರಾಜ್ಯಕ್ಕೂ ಒಂದು ನಿಗದಿತ ಸಂಸದರ ಸಂಖ್ಯೆಯನ್ನು ನಿರ್ಧಿಷ್ಟಪಡಿಸಲಾಗಿರುತ್ತದೆ.ಉತ್ತರ ಪ್ರದೇಶ ರಾಜ್ಯವು ಅತ್ಯಧಿಕ ಸಂಸದರನ್ನೊಳಗೊಂಡಿದೆ. ಕೇಂದ್ರ ಸರ್ಕಾರ ರಚನೆಗೆ ಬಹುಮತದ ಪಕ್ಷ ಅಥವಾ ಸಮ್ಮಿಶ್ರ ಪಕ್ಷಗಳ,ನೇರವಾಗಿ ಲೋಕಸಭೆಗೆ ಆಯ್ಕೆಯಾದವರನ್ನು ಪರಿಗಣಿಸಲಾಗುತ್ತದೆ

ಐರ್ಲೆಂಡ್

ಐರ್ಲೆಂಡ್ ನಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಎಂದರೆ 1801ರ ಪಾರ್ಲಿಮೆಂಟ್ ಆಫ್ ಐರ್ಲೆಂಡ್ ನ ಪೂರ್ವದ ಐರಿಶ್ ಹೌಸ್ ಆಫ್ ಕಾಮನ್ಸ್ ನ ಸದಸ್ಯರೆಂದು ಗುರುತಿಸಲಾಗುತ್ತದೆ. ಸುಮಾರು 1801 ರಿಂದ 1922 ವರೆಗಿನ ನಿಯಮದಂತೆ ಯುನೈಟೆಡ್ ಕಿಂಗ್ ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ಹೌಸ್ ಆಫ್ ಕಾಮನ್ಸ್ ಗೆ ಚುನಾವಣೆ ಮೂಲಕ ಆಯ್ಕೆಯಾದವರನ್ನು ಸಂಸದರೆಂದು ಕರೆಯಲಾಗುತ್ತದೆ.

ಉತ್ತರ ಅಥವಾನಾರ್ದರ್ನ್ ಐರ್ಲೆಂಡ್ ,ಆಧುನಿಕ ಪಾರ್ಲಿಮೆಂಟ್ ಆಫ್ ದಿ ಯುನೈಟೆಡ್ ಕಿಂಗ್ ಡಮ್ ಗೆ MPs ಗಳನ್ನು ನಿರಂತರವಾಗಿ ಆಯ್ಕೆ ಮಾಡುತ್ತದೆ.

ಐರಿಶ್ ಮುಕ್ತ ರಾಜ್ಯವು (1922)ರಲ್ಲಿ ರಚನೆಯಾದ ನಂತರ ಅಂದರೆ ಯುನೈಟೆಡ್ ಕಿಂಗ್ ಡಮ್ ನಿಂದ ವಿಮೋಚನೆ ಪಡೆದ ರಿಪಬ್ಲಿಕ್ ಆಫ್ ಐರ್ಲೆಂಡಿನ ಕೆಳಮನೆ ಸದಸ್ಯರನ್ನು(1949)ಡೇಲ್ ಐರಿಯನ್ (ಅಥವಾ "ದಿ ಡೇಲ" )ತೆಕ್ತೈ ಡಾಲಾ )ತೆಕ್ತಾ ಡಾಲಾ (ಏಕವಚನ)ಅಥವಾ TDs ಎಂದು ಸಂಭೋದಿಸಲಾಗುತ್ತದೆ. ಮೇಲ್ಮನೆಯನ್ನು ಸೆನದ್ ಐರೆನ್ ಎಂದು ಕರೆಯುತ್ತಾರೆ. ಇದರ ಸದಸ್ಯರನ್ನುಸೆನದೊಯಿರಿ ಅಥವಾ ಸೆನೆಟರ್ಸ್ ಎಂದು ಹೇಳುತ್ತಾರೆ.

ಕೀನ್ಯ

ಕೀನ್ಯದ ನ್ಯಾಶನಲ್ ಅಸೆಂಬ್ಲಿಯು 210 ಚುನಾಯಿತ ಸದಸ್ಯರನ್ನು ಒಳಗೊಂಡಿರುತ್ತದೆ.ಹನ್ನೆರಡು ಸದಸ್ಯರ ನಾಮಕರಣ ಇವರೆಲ್ಲರನ್ನು ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಅಥವಾ ಸಂಸದರೆಂದು [೨] ಕರೆಯುತ್ತಾರೆ.

ಮಲೆಷ್ಯಾ

ಮಲೆಷ್ಯಿಯನ್ ಪಾರ್ಲಿಮೆಂಟ್ ನ್ನು(ಮಲೆಷ್ಯಾ ಸಂಸತ್ತು) ಪಾರ್ಲಿಮೆಂಟ್ ಆಫ್ ದಿ ಯುನೈಟೆಡ್ ಕಿಂಗ್ ಡಮ್ ಮಾದರಿಯಲ್ಲಿ ರಚಿಸಲಾಗಿದೆ.ಇದರಲ್ಲಿ ಎರಡು ಮನೆಗಳಿವೆ;ಒಂದು ದಿವಾನ್ ರಕ್ಯತ್ ಅಂದರೆ ಇದು ಹೌಸ್ ಆಫ್ ರಿಪ್ರಜೆಂಟಿಟಿವ್ಸ್ ಮತ್ತೊಂಡು ದಿವಾನ್ ನೆಗರಾ ,ಅಂದರೆ ಸೆನೆಟ್ ಎಂದು ಕರೆಯಲಾಗುತ್ತದೆ.

ದಿವಾನ್ ರಕ್ಯತ್ ನ ಸದಸ್ಯರು ಸಾರ್ವತ್ರಿಕ ಚುನಾವಣೆಗಳ ಮೂಲಕ ಅಥವಾ ಉಪ ಚುನಾವಣೆಗಳ ಮುಖಾಂತರ ಆಯ್ಕೆಯಾಗುತ್ತಾರೆ; ಆದರೆ ದಿವಾನ್ ನೆಗರಾ ದ ಸದಸ್ಯರು ರಾಜಪ್ರಭುತ್ವದಿಂದ ಇಲ್ಲವೇ ಅವರ ಅತ್ಯುತ್ತಮ ಸೇವೆಗಳನ್ನು ಆಧರಿಸಿ ರಾಜ್ಯಗಳ ಮೂಲಕ ಆಯ್ಕೆ ಪಡೆಯುತ್ತಾರೆ. ಪ್ರತಿಯೊಂದು ರಾಜ್ಯವು ತನ್ನ ಗಾತ್ರದ ಆಧಾರದ ಮೇಲೆ ಸೆನೆಟರ್ ಗಳನ್ನು ನೇಮಕ ಮಾಡುತ್ತದೆ

ಸಂಸದ್ ಸದಸ್ಯರನ್ನು ಗೌರವಪೂರ್ವಕವಾಗಿ ಯಾಂಗ್ ಬೆರೊರ್ ಮತ್ ("ಘನತೆವೆತ್ತ")ಅಂದರೆ Y.B. ಎಂದು ಸಂಭೋದಿಸಲಾಗುವುದಲ್ಲದೇ ಅದನ್ನು ಪೂರ್ವ ಸೂಚಕವಾಗಿ ಬಳಸಲಾಗುತ್ತದೆ. ರಾಜ ಪ್ರಭುತ್ವದ ರಾಜ ಸಂಸತ್ತಿನ ಸದಸ್ಯನಾಗಿರುತ್ತಾನೆ ಆತನನ್ನು ಬೆರೊರ್ ಮತ್ ಮುಲಿಯಾ ಎಂದು ಹೇಳಲಾಗುತ್ತದೆ.

ಮಾಲ್ಟಾ

ದಿ ಪಾರ್ಲಿಮೆಂಟ್ ಆಫ್ ಮಾಲ್ಟಾವು 69ಸದಸ್ಯರನ್ನೊಳಗೊಂಡಿದೆ,ಈ ಸ್ಥಾನಗಳನ್ನು ಎರಡು ರಾಜಕೀಯ ಪಕ್ಷಗಳು ಹಂಚಿಕೊಂಡಿರುತ್ತವೆ;35ಸ್ಥಾನಗಳು ಪಾರ್ಟಿಟ್ ನಜ್ಜೊನಾಲಿಸ್ಟಾ ಇನ್ನುಳಿದ 34 ಪಾರ್ಟಿಟ್ ಲೇಬುರಿಸ್ಟಾಕ್ಕಾಗಿರುತ್ತವೆ.

ನೌರು

ಪಾರ್ಲಿಮೆಂಟ್ ಆಫ್ ನೌರು 18 ಸ್ಥಾನಗಳನ್ನು ಹೊಂದಿದೆ,ಇದು ರಿಪಬ್ಲಿಕ್ ಆಫ್ ನೌರುವಿನ ಶಾಸನ ಸಂಸ್ಥೆಯಾಗಿದೆ. ಯಾರೆನ್ ಜಿಲ್ಲೆಯಲ್ಲಿ(ಪಾರ್ಲಿಮೆಂಟ್ ಹೌಸ್ ) ಸಂಸದ್ ಭವನವಿದೆ. ಇಲ್ಲಿನ ಸಂಸದರು ತಮ್ಮ ಹೆಸರಿನ ಎದುರಿಗೆ ದಿ ಆನ್ ರೇಬಲ್ ಎಂದು ಬರೆದುಕೊಳ್ಳುತ್ತಾರೆ.

ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್ ಒಂದು ಯುನಿಕ್ಯಾಮರಲ್ (ಅಥವಾ ಏಕೈಕ ಚೇಂಬರ್ )ಪಾರ್ಲಿಮೆಂಟನ್ನು ಹೊಂದಿದೆ.ಇದನ್ನುನ್ಯೂಜಿಲ್ಯಾಂಡ್ ಹೌಸ್ ಆಫ್ ರಿಪ್ರೆಜೆಂಟಿಟಿವ್ಸ,ಎಂದರೂ ಕೂಡಾ ಇಲ್ಲಿನ ಪಾರ್ಲಿಮೆಂಟ್ ತಾಂತ್ರಿಕವಾಗಿ ಹೌಸ್ ಮತ್ತು ರಾಜಪ್ರಭುತ್ವವನ್ನು ಹೊಂದಿರುತ್ತದೆ. ಸದ್ಯ ಮೆಂಬರ್ ಆಫ್ ಪಾರ್ಲಿಮೆಂಟ್ ಎಂಬುದನ್ನು ಮೆಂಬರ್ ಆಫ್ ದಿ ಹೌಸ್ ಆಫ್ ರಿಪ್ರೆಜೆಂಟೇಟಿವ್ಸ್ ಗೆ ಬಳಸುವ ಪದ.ಇದು ಸಾಮಾನ್ಯವಾಗಿ 120ಸದಸ್ಯರನ್ನೊಳಗೊಂಡಿದ್ದು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಾರ್ವರ್ತ್ರಿಕ ಚುನಾವಣೆಗಳಲ್ಲಿ ಆಯ್ಕೆ ನಡೆಯುತ್ತದೆ. ಒಟ್ಟು 69 ಮತಕ್ಷೇತ್ರಗಳಿಂದ ಸದಸ್ಯರಿರುತ್ತಾರೆ,ಇದರಲ್ಲಿ ಏಳು ಮಾಯೊರಿಯ ಮೂಲಕ ಚುನಾಯಿತರಾಗುತ್ತಾರೆ,ಅಂದರೆ ವಿಶೇಷ ಮಾಯೊರಿ ಸ್ಥಾನಗಳಿಗಾಗಿಯೇ ಚುನಾವಣೆ ನಡೆಯುವುದು.ಇನ್ನುಳಿದ 51ಸದಸ್ಯರು ಆಯಾ ಪ್ರಮಾಣಕ್ಕನುಗುಣವಾಗಿ ಪಕ್ಷದ ಪಟ್ಟಿಗಳ ಮೂಲಕ ಆಯ್ಕೆಯಾಗುತ್ತಾರೆ.

ನ್ಯೂಜಿಲ್ಯಾಂಡ್ 1951ರ ಮುಂಚೆ ಬೈಕ್ಯಾಮೆರಲ್ (ಅಂದರೆ ಎರಡು ವಿಭಾಗ)ದ ಪಾರ್ಲಿಮೆಂಟ್ ಆಗಿತ್ತು.ಅಲ್ಲಿ ಎರಡು ಪದನಿಮಿತ್ತಗಳಿದ್ದವು:ಮೆಂಬರ್ ಆಫ್ ದಿ ಹೌಸ್ ಆಫ್ ರಿಪ್ರೆಂಟೇಟಿವ್ಸ್ ,ಸಂಕ್ಷಿಪ್ತವಾಗಿ MHR,ಈ ಸಂಸತ್ತು ಇಂದು ಅಸ್ತಿತ್ವದಲ್ಲಿದೆ,ಮತ್ತು ಮೆಂಬರ್ ಆಫ್ ದಿ ಲೆಜಿಸ್ಲೇಟಿವ್ ಕೌನ್ಸಿಲ್ MLC ಎಂದು ಹೇಳಲಾಗುತ್ತದೆ.

ಪಾಕಿಸ್ತಾನ್

ಪಾಕಿಸ್ತಾನ್ ದಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಅಂದರೆ (ನ್ಯಾಶನಲ್ ಅಸೆಂಬ್ಲಿ ಆಫ್ ಪಾಕಿಸ್ತಾನ್ ದ ಸದಸ್ಯರು;ಕ್ವಾಮಿ ಅಸೆಂಬ್ಲಿ) ದಿ ನ್ಯಾಶನಲ್ ಅಸೆಂಬ್ಲಿಯು ಇಸ್ಲಾಮಾಬಾದಲ್ಲಿದೆ.

ಸಿಂಗಾಪುರ್

ಸಿಂಗಾಪುರ್ ನಲ್ಲಿ ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಅಂದರೆ ಪಾರ್ಲಿಮೆಂಟ್ ಆಫ್ ಸಿಂಗಾಪುರ್ ದ ಚುನಾಯಿತ ಸದಸ್ಯರು.ಮತಕ್ಷೇತ್ರಗಳ ರಹಿತ ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಸದಸ್ಯರನ್ನು ಮತ್ತು ನಾಮಿನೇಟೆಡ್ ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಅವರನ್ನು ವಿರೋಧಿ ಪಕ್ಷದ ಸದಸ್ಯರು ಆಯ್ಕೆ ಮಾಡುತ್ತಾರೆ,ಇವರನ್ನು ಯಾವುದೇ ಪಕ್ಷಕ್ಕೆ ಸೇರದ ಸಾರ್ವಜನಿಕರು ಆಯ್ಕೆ ಮಾಡುವ ಅವಕಾಶವನ್ನೂ ಹೊಂದಿದ್ದಾರೆ.

ಶೀಲಂಕಾ

ಶ್ರೀಲಂಕಾಮೆಂಬರ್ಸ್ ಆಫ್ ಪಾರ್ಲಿಮೆಂಟ್ ಅಂದರೆ ಪಾರ್ಲಿಮೆಂಟ್ ಆಫ್ ಶ್ರೀಲಂಕಾಕ್ಕೆ ಚುನಾಯಿತರಾದ ಸದಸ್ಯರು,ಅಲ್ಲದೇ ನ್ಯಾಶನಲಿಸ್ಟ್ ಮೆಂಬರ್ ಆಫ್ ಪಾರ್ಲಿಮೆಂಟ್ ಸದಸ್ಯರನ್ನು ಸ್ಪರ್ಧಿಸಿರುವ ಪಕ್ಷಗಳಿಂದ ನಾಮಕರಣಗೊಳಿಸುವುದು.(ಅಲ್ಲದೇ ಸ್ವತಂತ್ರ ಗುಂಪಿನವರು)ಆಯಾ ಮತಗಳ ಅನುಪಾತದಂತೆ ನಾಮಕರಣಗೊಂಡವರು. ಬಹುಮತದ ಒಂದು ಪಕ್ಷ ಅಥವಾ ಬಹುಮತಕ್ಕೆ ಬೆಂಬಲಿತ MP ಗಳ ಗುಂಪು ಸರ್ಕಾರವನ್ನು ರಚಿಸುತ್ತದೆ.

ಯುನೈಟೆಡ್ ಕಿಂಗಡಮ್

ಯುನೈಟೆಡ್ ಕಿಂಗಡಮ್ ಮೂರು ತೆರನಾದ ವಿವಿಧ ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಇರುತ್ತಾರೆ":

ಸುಮಾರು 1921 ಮತ್ತು 1973ರ ನಡುವೆ ನಾರ್ದರ್ನ್ ಐರ್ಲೆಂಡ್ ನ್ನು ಪಾರ್ಲಿಮೆಂಟ್ ಆಫ್ ನಾರ್ದರ್ನ್ ಐರ್ಲೆಂಡ್ನ ಆಡಳಿತಕ್ಕೆ ಒಳಪಡಿಸಲಾಗಿತ್ತು.ನಂತರ ಅಭಿವೃದ್ಧಿ ಪಡೆದ ಅಸೆಂಬ್ಲಿಯ ಸದಸ್ಯರನ್ನು ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಸದ್ಯ ನಾರ್ದರ್ನ್ ಐರ್ಲೆಂಡ್ ಅಸೆಂಬ್ಲಿಯ ಸದಸ್ಯರನ್ನು ಮೆಂಬರ್ಸ್ ಆಫ್ ದಿ ಲೆಜಿಸ್ಲೇಟಿವ್ ಅಸೆಂಬ್ಲಿ (MLA )ಎಂದು ಹೇಳುತ್ತಾರೆ.

ದಿ ನ್ಯಾಶನಲ್ ಅಸೆಂಬ್ಲಿ ಫಾರ್ ವೇಲ್ಸ್ ಅರವತ್ತು ಚುನಾಯಿತ ಸದಸ್ಯರನ್ನು ಒಳಗೊಂಡಿದೆ;ಆದರೆ ಇದನ್ನು ಪಾರ್ಲಿಮೆಂಟ್ ಎಂದು ಕರೆಯುವದಿಲ್ಲ.ಅದಕ್ಕೆ ಬದಲಾಗಿ ಅವರನ್ನು ಇಂಗ್ಲಿಷ್ ನಲ್ಲಿ ಅಸೆಂಬ್ಲಿ ಮೆಂಬರ್ಸ್ (AMs )ಅಥವಾ ವೆಲ್ಶ್ ನಲ್ಲಿ ಎಲೊಡ್ ವೈ ಸಿನ್ನುಲಿಯಡ್ (AC )[೩] ಎನ್ನುತ್ತಾರೆ.

ಮೆಂಬರ್ಸ್ ಆಫ್ ದಿ ಹೌಸ್ ಆಫ್ ಕಾಮನ್ಸ್ ಅವರುಗಳನ್ನು ಸಾರ್ವತ್ರಿಕ ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಚುನಾಯಿಸಲಾಗುತ್ತದೆ.ಚುನಾವಣಾ ಮೊದಲ-ಶ್ರೇಣಿಯ-ಹುದ್ದೆಗಳ ಆದ್ಯತೆಯ ಮೇರೆಗೆ ಆಯಾ ಮತಕ್ಷೇತ್ರಗಳನ್ನು ಪ್ರತಿನಿಧಿಸುವಂತೆ ಆಯ್ಕೆ ಮಾಡಲಾಗುತ್ತದೆ.ಹೀಗೆ ಆಯ್ಕೆಯಾದವರು ಪಾರ್ಲಿಮೆಂಟ್ ವಿಸರ್ಜನೆಯಾಗುವವರೆಗೂ ಸದಸ್ಯರಾಗಿ ಮುಂದುವರೆಯುತ್ತಾರೆ.ಅಂದರೆ ಇದು ಸಾರ್ವತ್ರಿಕ ಚುನಾವಣೆ ನಡೆದ ಐದು ವರ್ಷಗಳಲ್ಲಿ ಸಂಭವಿಸಬೇಕಿದೆ.ಈ ವಿಷಯವನ್ನುಪಾರ್ಲಿಮೆಂಟ್ ಕಾನೂನು 1911ರ ಅನ್ವಯ ನಡೆಸಲಾಗುತ್ತದೆ.

ಓರ್ವ ಅಭ್ಯರ್ಥಿಯು ಪಾರ್ಲಿಮೆಂಟ್ ಸದಸ್ಯನೆನಿಸಬೇಕಾದರೆ ಆತ ಬ್ರಿಟಿಶ್ ಅಥವಾ ಐರಿಶ್ ಅಥವಾ ಕಾಮನ್ ವೆಲ್ತ್ ನ ನಾಗರಿಕನಾಗಿರಬೇಕಾದುದು ಕಡ್ಡಾಯವಾಗಿದೆ.ಆತ 18ವರ್ಷಕ್ಕೆ ಮೇಲ್ಪಟ್ಟ ವಯೋಮಿತಿ ಹೊಂದಿರಬೇಕು,ಸಾರ್ವಜನಿಕ ಕಚೇರಿಯ ಸಿಬ್ಬಂದಿ ಅಥವಾ ಯಾವುದೇ ನಿಗದಿತ ಕಚೇರಿ ಹೊಂದದೇ ಅಂದರೆ ಎಲೆಕ್ಟೊರಲ್ ಅಡ್ಮಿನಿಸ್ಟ್ರೇಶನ್ ಕಾನೂನು 2006ರ ನಿಯಮದಂತೆ ಸರ್ಕಾರಿ ಕೆಲಸ [೪] ಹೊಂದಿರಬಾರದು(ಇದರಲ್ಲಿ ವಯೋಮಿತಿಯ ಕಡಿತದ ನಿಯಮವಿದೆ,ಅಭ್ಯರ್ಥಿಯು ಕನಿಷ್ಟ 21ವರ್ಷದವನಾಗುವವರೆಗೆ ಎಂಬ ನಿಯಮವನ್ನು 2006ರಲ್ಲಿ ಅಳವಡಿಸಲಾಗಿದೆ.)

ಪಾರ್ಲಿಮೆಂಟ್ ಸದಸ್ಯರು ತಾಂತ್ರಿಕವಾಗಿ ತಮ್ಮ ಸ್ಥಾನಕ್ಕೆ ಸಾಮಾನ್ಯವಾಗಿ ರಾಜಿನಾಮೆ ಕೊಡದಂತೆ ನಿಷೇಧಿಸಲಾಗಿದೆ.(ಆದರೆ ಮರು ಚುನಾವಣೆ ನಡೆಸುವ ಸಂಬಂಧದಲ್ಲಿ ಅವರು ಇಂತಹ ಒತ್ತಾಯಗಳನ್ನು ನಿಷೇಧಿಸಲಾಗದು) ಆಯ್ಕೆಯಾದ ಸ್ಥಾನವನ್ನು ಚುನಾವಣೆ ಮಧ್ಯದಲ್ಲಿ ಸ್ವಯಂಪ್ರೇತರಾಗಿ ಬಿಟ್ಟು ಬಿಡಲು ಅವರು ತಮ್ಮ ಸ್ಥಾನದ "ಖರ್ಚುವೆಚ್ಚದ ಬಗ್ಗೆ ರಾಜಪ್ರಭುತ್ವ"ದ ಗಮನಕ್ಕೆ ತರಬೇಕಾಗುತ್ತದೆ. ಸಾಮಾನ್ಯವಾಗಿ ರಾಜಪ್ರಭುತ್ವದ ಅಂದರೆ ಚಿಲ್ಟರ್ನ್ ಹಂಡ್ರೆಡ್ಸ್ ಮತ್ತು ಮ್ಯಾನರ್ ಆಫ್ ನಾರ್ಥ್ ಈಸ್ಟ್ ಭಾಗಗಳ ಮೂಲಕ ತಮ್ಮ ರಾಜಿನಾಮೆಗೆ ಅವರು ಸಮ್ಮತಿ ಪಡೆಯಬೇಕಾಗುತ್ತದೆ.ಹೀಗೆ ಕ್ರೌನ್ ಅಥವಾ ಪಾರುಪತ್ಯದ ಅಧಿಕಾರದ ಮೂಲಕ ತಮ್ಮ ರಾಜಿನಾಮೆಯನ್ನು ಊರ್ಜಿತಗೊಳಿಸಲಾಗುತ್ತದೆ. ಹೀಗೆ ಸಂಭಾವನೆಯ ಸಚಿವಾಲಯದ ಕಚೇರಿಯನ್ನು ನಿಭಾಹಿಸಲು ಈ ಮೊತ್ತ ನೀಡಿಕೆಯ [೫] ಅಗತ್ಯವಿರುವದಿಲ್ಲ.

ಮೆಂಬರ್ ಆಫ್ ಹೌಸ್ ಆಫ್ ಕಾಮನ್ಸ್ ನ ಮೂಲ ವೇತನವನ್ನು £64,766ಗೆ ಏಪ್ರಿಲ್ 1,2009ರಿಂದ ಏರಿಸಲಾಗಿದೆ. ಕೆಲವು MPಗಳು (ಸಚಿವರು,ಸ್ಪೀಕರ್ ,ವಿರೋಧ ಪಕ್ಷದ ಹಿರಿಯ ನಾಯಕ ಮುಂತಾದವರು.)ತಮಗೆ ವಹಿಸಿಕೊಟ್ಟ ವಿಶೇಷ ಜವಾಬ್ದಾರಿಗಳಿಗಾಗೆ ಹೆಚ್ಚಿನ ಸಂಬಳ ಪಡೆಯುತ್ತಾರೆ. ಅದೇ ರೀತಿ 1ಏಪ್ರಿಲ್ 2008ರ ನಿಯಮದಂತೆ ಈ ಹೆಚ್ಚಳಗಳು ಆಯ್ಕೆ ಸಮಿತಿಯ ವತಿಯಿಂದ ನೀಡುವ ಸಂಬಳವು £14,039ರಿಂದ£130,959ವರೆಗೆ ಪ್ರಧಾನ ಮಂತ್ರಿಗಳಿಗೆ ಇರುತ್ತದೆ ಸದಸ್ಯರು ತಮ್ಮ ನಿವಾಸದಿಂದ ಹೊರಗಡೆ ಇರುವಾಗ ಅಲ್ಲಿನ ವಸತಿಗೆ ಬೇಕಾದ ಸಾಮಾನು ಖರೀದಿ ಹಾಗು ತಮ್ಮ ಖರ್ಚು ವೆಚ್ಚಗಳನ್ನು [೬] ಪಡೆಯುತ್ತಾರೆ. UK MPಗಳ ಪಿಂಚಣಿಯು ಸಮನಾಗಿ, ಸಾಮಾನ್ಯವಾಗಿ ಧಾರಾಳವಾಗಿರುತ್ತದೆ. ಸದಸ್ಯರ ಸ್ವಾಭಾವಿಕ ಪಿಂಚಣಿಯು ಅವರ ಕೊನೆಯ ಪಿಂಚಣಿ ಪಡೆವ ಸಂಬಳದ 1/40ನೆ ಅಥವಾ 1/50ರಷ್ಟಿರುತ್ತದೆ.ಅಂದರೆ ಪ್ರತಿವರ್ಷ ಪಿಂಚಣಿಗೆ ಸೂಕ್ತವಾಗುವ ಪ್ರಮಾಣವನ್ನು ಅವಲಂಬಿಸಿರುತ್ತದೆ.ಇದರಲ್ಲಿ ಅವರು ಆಯ್ಕೆ ಮಾಡುವ ತಮ್ಮ ಪಾಲನ್ನು ಒಳಗೊಂಡಿರುತ್ತದೆ. ಈ ನಿಧಿಗೆ 10%ರಷ್ಟು ಸೇರಿಸುವವರು ತಮ್ಮ ಸಂಬಳದ ಪ್ರಮಾಣಕ್ಕನುಗುಣವಾಗಿ 1/40ರಷ್ಟು [೭] ಪಡೆಯುತ್ತಾರೆ. ಉದಾಹರಣೆಗೆ 26ವರ್ಷಗಳ ಕಾಲ ಸೇವೆ ಸಲ್ಲಿಸಿದ ಒಬ್ಬMPಯು ವಾರ್ಷಿಕ ಬೆಲೆಯೇರಿಕಯ ರಕ್ಷಣಾ ಕವಚದೊಂದಿಗೆ ತಮ್ಮ ಪಿಂಚಣಿಯಿಂದ £40,000 ಪಡೆಯಲು ಸಾಧ್ಯವಿದೆ. ಡೇಲಿ ಮೇಲ್ ನ ವರದಿಯ ಪ್ರಕಾರ ಬ್ರಿಟಿಶ್ ಸದಸ್ಯರಿಗೆ ರಾಜ್ಯದ ಕೊಡುಗೆಯು ಕಂಪನಿಗಳು ತಮ್ಮ ನೌಕರರಿಗೆ ನೀಡುವ ಕೊನೆಯ ಸಂಬಳ ಪ್ರಮಾಣದ ನಾಲ್ಕರಷ್ತಿರುತ್ತದೆ.ಆದರೂ ಕೆಲವು ಸಾರ್ವಜನಿಕ ಕಂಪನಿಗಳು ನೀಡುವ ಪ್ರಮಾಣಕ್ಕಿಂತ ಹೆಚ್ಚಿರಲಾರದು ಎಂದು [೮] ಅಂದಾಜಿಸಲಾಗಿದೆ.

ಹೌಸ್ ಆಫ್ ಲಾರ್ಡ್ಸ್ ನ ಸದಸ್ಯರು ಒಂದು ಲಿಜಿಸ್ಲೇಟಿವ್ ಚೇಂಬರ್ ನ ಭಾಗವಾಗಿರುತ್ತಾರೆ.ಇವರು ಹೀಗೆ ಪಾರ್ಲಿಮೆಂಟ್ ಆಫ್ ಯುನೈಟೆಡ್ ಕಿಂಗಡಮ್ ಮೂಲ ಪಾಲುದಾರರೂ ಆಗಿರುತ್ತಾರೆ. ಆದರೂ ಅವರು ತಾಂತ್ರಿಕವಾಗಿ ಪಾರ್ಲಿಮೆಂಟ್ ನ ಭಾಗವಾಗಿದ್ದಾರೆ,ಆದರೆ ಅವರು ಯುನೈಟೆಡ್ ಕಿಂಗಡಮ್ ನ ಮೆಂಬರ್ಸ್ ಆಫ್ ಪಾರ್ಲಿಮೆಂಟ್ ಎಂದು ಕರೆಯಲ್ಪಡುವುದಿಲ್ಲ.ಆದರೆ ಇವರನ್ನು ಸಿರಿವಂತರು,ಅಥವಾ ಹೆಚ್ಚಾಗಿ ಲಾರ್ಡ್ಸ್ ಆಫ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ಅವರು ಜೀವಮಾನವಿಡೀ ಇಲ್ಲವೆ ಲಾರ್ಡಸ್ ಟೆಂಪೊರಲ್ (ಅಶಾಶ್ವತ),ಅಥವಾ ಲಾರ್ಡ್ಸ್ ಆಧ್ಯಾತ್ಮಕತೆಯ ಹುದ್ದೆ ಹೊಂದಿರುವ ತನಕ ಅವರು ತಮ್ಮ ಸ್ಥಾನವನ್ನು ಸ್ವೇಚ್ಛೆಯಿಂದ ಉಳಿಸಿಕೊಳ್ಳಲು ಸಾಧ್ಯವಿದೆ. ಹೌಸ್ ಆಫ್ ಲಾರ್ಡ್ಸನಲ್ಲಿ ಉತ್ತರಾಧಿಕಾರಿ ಸಿರಿವಂತರು ತಮ್ಮ ಸ್ಥಾನವನ್ನು ಆ ಕೂಡಲೇ ತಮ್ಮ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲಾರರು. ಇದರಲ್ಲಿ ತೊಂಬತ್ತೆರಡು ಸದಸ್ಯರು [೯] ಹೌಸ್ ಆಫ್ ಲಾರ್ಡ್ಸ್ ಆಕ್ಟ್ 1999ರ ಪ್ರಕಾರ ತಮ್ಮ ಸ್ವಂತ ಸದಸ್ಯರ ಮೂಲಕ ಆಯ್ಕೆಯಾದವರು;ವಿರೋಧಾಭಾಸವೆಂದರೆ ಕೇವಲ ಇವರಷ್ಟೆ ಲಾರ್ಡ್ಸನ ಚುನಾಯಿತ [೯] ಪ್ರತಿನಿಧಿಗಳಾಗಿದ್ದಾರೆ

ಜಿಂಬಾಬ್ವೆ

ಜಿಂಬಾಬ್ವೆನಲ್ಲಿ "ಮೆಂಬರ್ ಆಫ್ ಪಾರ್ಲಿಮೆಂಟ್ "ಎಂದರೆ ಹೌಸ್ ಆಫ್ ಅಸೆಂಬ್ಲಿ ಆಫ್ ಜಿಂಬಾಬ್ವೆಯ ಸದಸ್ಯರು ಮಾತ್ರ ಪರಿಗಣಿತರಾಗುತ್ತಾರೆ. ಮೇಲ್ಮನೆಯ ಪಾರ್ಲಿಮೆಂಟ್ ಸದಸ್ಯರನ್ನು ಇದರ ಬದಲಾಗಿ ಸೆನೆಟರ್ಸ್ ಎಂದು ಕರೆಯಲಾಗುತ್ತದೆ.

ಇನ್ನುಳಿದ ವಿಧಾನಗಳು

ಮೆಂಬರ್ ಆಫ್ ಪಾರ್ಲಿಮೆಂಟ್ ಎಂಬ ಪದವನ್ನು ಇನ್ನುಳಿದ ಪ್ರಜಾಪ್ರಭುತ್ವದ ವಿಧಾನದ ಸಂಸದೀಯ ಕ್ರಮವನ್ನು ವೆಸ್ಟ್ ಮಿನಿಸ್ಟರ್ ಪದ್ದತಿಯನ್ನು ಅನುಸರಿಸದ ದೇಶಗಳಲ್ಲಿಯೂ ಬಳಸಲಾಗುತ್ತಿದೆ.ಹೀಗೆ ಇದೇ ಪದವನ್ನು ವಿವಿಧ ಅರ್ಥಗಳಲ್ಲಿ ಉಪಯೋಗಿಸಲಾಗುತ್ತದೆ.ಉದಾಹರಣೆಗೆ ಫ್ರಾನ್ಸನಲ್ಲಿ ಡೆಪ್ಯುಟೆ ,ಪೊರ್ಚಗಲ್ ಮತ್ತು ಬ್ರಾಜಿಲ್ ನಲ್ಲಿ ಡಿಪುಟಾಡೊ ,ಡೆಪುಟಾಡೊ ,ಜರ್ಮನಿಯಲ್ಲಿ ಮಿಟಗ್ಲೈಡ್ ಡೆಸ್ ,ಬಂಡೆಸ್ಟ್ಯಾಗ್ MdB ಗಳು ಎನ್ನುತ್ತಾರೆ. ಆದಾಗ್ಯೂ ಉತ್ತಮ ಭಾಷಾಂತರಗಳು ಆಗಾಗ್ಗೆ ಉತ್ತಮ ಫಲಿತಾಂಶ ನೀಡುತ್ತವೆ.

ಆಸ್ಟ್ರಿಯಾ

ಆಸ್ಟ್ರಿಯಾದಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಎಂದರೆ ಪಾರ್ಲಿಮೆಂಟ್ ಆಫ್ ಆಸ್ಟ್ರಿಯಾದ ಎರಡು ಸದನದ ಸದಸ್ಯರು ಆಸ್ಟೆರೆಚ್ಸೆಚಿಸ್ ಪಾರ್ಲಿಮೆಂಟ್ ಎಂದು ಕರೆಯುತ್ತಾರೆ. ದಿ ಮೆಂಬರ್ಸ್ ಆಫ್ ದಿ ನ್ಯಾಶನಲ್ರಾಟ್ ಗಳನ್ನು ಅಬ್ಗೊರ್ಡೆನಎಟೆ ಜುಮ್ ನ್ಯಾಶನಲ್ರಾಟ್ ಎನ್ನುವರು. ಬಂಡೆಸ್ರಾಟ್ ಸದಸ್ಯರುಗಳು ಪ್ರಾಂತೀಯ ಮತದಾರರಿಂದ ಚುನಾಯಿತರಾಗುತ್ತಾರೆ.(ಲ್ಯಾಂಡ್ ಟ್ಯಾಗ್ ಇ )ಇವರೆಲ್ಲರೂ ಆಸ್ಟ್ರಿಯಾ ರಾಜ್ಯಗಳದ ಒಂಬತ್ತು ಒಕ್ಕೂಟಗಳಿಂದ ಆಯ್ಕೆಯಾಗುತ್ತಾರೆ.ಇವರನ್ನು ಮಿಟ್ಗ್ಲೈಡರ್ ಬಂಡೆಸ್ರಾಟ್ಸ್ ಎನ್ನುತ್ತಾರೆ.

ಬಲ್ಗೇರಿಯಾ

ಬಲ್ಗೇರಿಯಾದಲ್ಲಿ ಸಾಮಾನ್ಯ ಸಂಸತ್ತಿನಲ್ಲಿ 240MPಗಳು ಮತ್ತು "ಗ್ರೇಟ್ ಪಾರ್ಲಿಮೆಂಟ್ "ನಲ್ಲಿ 400 ಸದಸ್ಯರಿರುತ್ತಾರೆ. ಹೊಸ ಸಂವಿಧಾನದ ನಿಯಮಗಳ ಪ್ರಕಾರ ಗ್ರೇಟ್ ಪಾರ್ಲಿಮೆಂಟ್ ಚುನಾಯಿಸಲ್ಪಡುತ್ತದೆ. ಆಧುನಿಕ ಬಲ್ಗೇರಿಯಾದ ಇತಿಹಾಸದಲ್ಲಿ ಒಟ್ಟು"ಏಳು ಗ್ರೇಟ್ ಪಾರ್ಲಿಮೆಂಟ್ ಆಗಿ ಹೋಗಿವೆ,ಅಂದರೆ 1879,1881,1886,1893,1911,1946 ಮತ್ತು 1990ರಲ್ಲಿ ಅವು ಅಸ್ತಿತ್ವದಲ್ಲಿದ್ದವು.

ಜರ್ಮನಿ

ಜರ್ಮನಿಯಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ (ಸಂಸದ)ಎಂದರೆ ಬರ್ಲಿನ್ ನಲ್ಲಿರುವ ರೆಚೆಸ್ಟ್ಯಾಗ್ ಕಟ್ಟದಲ್ಲಿರುವ ಫೆಡರಲ್ ಬಾಂಡೆಸ್ಟ್ಯಾಗ್ ನ ಚುನಾಯಿತ ಸದಸ್ಯರು ಜರ್ಮನನ ಒಬ್ಬ ಸದಸ್ಯನನ್ನು ಮಿಟ್ ಗ್ಲೈಡ್ ಡೆಸ್ ಡೆಟ್ಸುಚೆನ್ ಬಂಡೆಸ್ಟೇಗಿಸ್ (MdB)ಎನ್ನುತ್ತಾರೆ. ಒಟ್ಟು 16 ಫೆಡರಲ್ ಜರ್ಮನಿಯ ರಾಜ್ಯಗಳು ಲ್ಯಾಂಡರ್ ಗಳ ಮೂಲಕ ಬಂಡೆಸ್ರಾಟ್ ನಿಂದ ಪ್ರತಿನಿಧಿಸಲ್ಪಡುತ್ತವೆ.ಈ ಸದಸ್ಯರು ಹಿಂದಿನ ಪ್ರುಸಿಯನ್ ಹೌಸ್ ಆಫ್ ಲಾರ್ಡ್ಸ್ ಲ್ಯಾಂಡರರ್ಸ್ ನಲ್ಲಿ ತಮ್ಮ ಸಂಬಂಧಪಟ್ಟ ಸರ್ಕಾರಕ್ಕೆ ಕೆಲಸ ಮಾಡುತ್ತಾರೆ,ಆದರೆ ಇವರು ನೇರವಾಗಿ ಜನರಿಂದ ಆಯ್ಕೆಯಾಗಿರುವುದಿಲ್ಲ. ಬೇಸಿಕ್ ಲಾ ಫಾರ್ ದಿ ಫೆಡ್ರಲ್ ರಿಪಬ್ಲಿಕ್ ಆಫ್ ಜರ್ಮನಿಯ ಅಧಿನಿಯಮ 38ರಡಿ,ಸಂವಿಧಾನದ ಪ್ರಕಾರ "ಮೆಂಬರ್ಸ್ ಆಫ್ ದಿ ಜರ್ಮನ್ ಬಂಡೆಸ್ಟಾಯ್ಗ್ ಸದಸ್ಯರನ್ನು ಸಾರ್ವತ್ರಿಕವಾಗಿ,ನೇರವಾಗಿ,ಮುಕ್ತ,ಸಮನಾದ ಮತ್ತು ರಹಸ್ಯ ಚುನಾವಣೆಗಳನ್ನು ನಡೆಸಲಾಗುತ್ತದೆ. ಇಡೀ ಜನಸಮೂಹವನ್ನೇ ಅವರು ಪ್ರತಿನಿಧಿಸುತ್ತಾರೆ,ಅವರು ಯಾವುದೇ ಆಜ್ಞೆ,ಅಥವಾ ಸೂಚನೆ ಮತ್ತು ಜವಾಬ್ದಾರಿಗಳಿಗೆ ಅವರು ಕಟ್ಟುಬಿದ್ದಿರುವುದಿಲ್ಲ.ಅವರು ತಮ್ಮ ಸ್ವಂತ ಪರಿಜ್ಞಾನದ ಮೇಲೆ ಕೆಲಸ ಮಾಡಬೇಕಾಗುತ್ತದೆ.".

ಇಸ್ರೇಲ್

ಇಸ್ರೇಲ್ ನಲ್ಲಿ ಮೆಂಬರ್ ಆಫ್ ದಿ ನಿಸೆಟ್ ಅಂದರೆ ನಿಸೆಟ್ ನ 120 ಸದಸ್ಯರಲ್ಲಿ ಆತ ಒಬ್ಬ ಸದಸ್ಯ.

ಇಟಲಿ

ರಿಪಬ್ಲಿಕನ್ ಆಫ್ ಇಟಾಲಿಯನ್ ಪಾರ್ಲಿಮೆಂಟ್ (ಸಂಸತ್ತಿನಲ್ಲಿ)ಸದ್ಯ ಆ ಸದಸ್ಯರಿಗೆ ಡೆಪುಟ್ಯಾಟೊ (ಅಂದರೆ ಡೆಪುಟಿ ಅಂದರೆ ಜನರ ಪರವಾಗಿ ಕೆಲಸ ಮಾಡಲು ನೇಮಕ ಮಾಡಿದ್ದು)ಹಾಗೆಯೇ ಕೆಳಮನೆಗೆ ಕ್ಯಾಮರಾ ಡೆಯಿ ಡೆಪುಟ್ಯಾಟಿ ಎಂದು ಕರೆಯಲಾಗುತ್ತದೆ. ಅದೇ ರೀತಿಯಾಗಿ ಇನ್ನುಳಿದ ದೇಶಗಳಲ್ಲಿ ಮೇಲ್ಮನೆಯನ್ನು ಸೆನಾಟೊ ಮತ್ತು ಅದರ ಸದಸ್ಯರನ್ನು ಸೆನಾಟೊರಿ ಎನ್ನುತ್ತಾರೆ. ಡೆಪುಟ್ಯಾಟಿಗಳನ್ನು ಒನೊರವೊರ್ಲೆ (ಗೌರವಾನ್ವಿತರು)ಎಂಬ ನಾಮವಿಶೇಷಣದಿಂದ ಕರೆಯುತ್ತಾರೆ.

ಲೆಬೆನಾನ್

ದಿ ಪಾರ್ಲಿಮೆಂಟ್ ಆಫ್ ಲೆಬೆನಾನ್ (ಲೆಬೆನಾನ್ ಸಂಸತ್ತು)ನನ್ನು ಲೆಬನೀಸ್ ನ್ಯಾಶನಲ್ ಲೆಜಿಸ್ಲೇಚರ್ ಎನ್ನುತ್ತಾರೆ. ಇದು ವಯಸ್ಕ ಮತದಾರರ ಮೂಲಕ ಬಹುದ್ದೇಶಿತ ಸದಸ್ಯ ಮತಕ್ಷೇತ್ರಗಳಿಂದ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಲೆಬ್ ನಾನ್ ನ ಕ್ರಿಶ್ಚನ್ ಮತ್ತು ಮುಸ್ಲಿಮ್ ಸಮುದಾಯದ ಮೂಲದಿಂದ ಈ ಸದಸ್ಯರು ನೇಮಕಗೊಳ್ಳುತ್ತಾರೆ. ಇದರ ಮುಖ್ಯ ಕಾರ್ಯಚಟುವಟಿಕೆಗಳೆಂದರೆ ರಿಪಬ್ಲಿಕ್ ನ ಅಧ್ಯಕ್ಷರ ಆಯ್ಕೆ ಮಾಡಿ ಸರ್ಕಾರಕ್ಕೆ ಸಮ್ಮತಿ ನೀಡುವುದು,(ಇದು ಅಧ್ಯಕ್ಷರಿಂದ ನೇಮಕವಾಗಿರುವುದು,ಪ್ರಧಾನ ಮಂತ್ರಿ,ಸಂಪುಟ ಸಹೋದ್ಯೋಗಿಗಳು ಹಾಗು ಇತರ ಬಹುತೇಕ ಸದಸ್ಯರು ಪಾರ್ಲಿಮೆಂಟ್ ನಲ್ಲಿ ಪೂರ್ಣ ನಂಬುಗೆ ಇಟ್ಟಿರುತ್ತಾರೆ ಅಲ್ಲದೇ ಖರ್ಚು ಮತ್ತು ಕಾನೂನುಗಳನ್ನು ಸಮ್ಮತಿಸುವುದು.) ಅರೆಬಿಕ್ ನಲ್ಲಿ ಡೆಪುಟಿ ಹೆಸರನ್ನು ನಾಎಬ್(نائب)ಎನ್ನುತ್ತಾರೆ. ನಾಎಬ್ ನ ಬಹುವಚನವೆಂದರೆ ನುವಾಬ್ (نواب)ಎನ್ನುವರು.

ರಿಪಬ್ಲಿಕ್ ಆಫ್ ಮ್ಯಾಸೊಡಿನಾ

ರಿಪಬ್ಲಿಕ್ ಆಫ್ ಮ್ಯಾಸೊಡಿನಾ 120 ಸಂಸತ್ ಸದಸ್ಯರಿ(Macedonian: Sobranie)ರುತ್ತಾರೆ.ಇದನ್ನು 'ಪ್ರಟೆನಿಸಿ'ಎನ್ನುತ್ತಾರೆ.(ಏಕ ವಚನದಲ್ಲಿ ಇವರನ್ನು ಪ್ರಟೆನಿಕ್ ಎನ್ನುವರು)

ದಿ ನೆದರ್ ಲ್ಯಾಂಡ್ಸ್

ದಿ ನೆದರ್ ಲ್ಯಾಂಡ್ಸ್ ನ ಪಾರ್ಲಿಮೆಂಟ್ ಸದಸ್ಯರನ್ನು ಸ್ಟೇಟೆನ್ -ಜನರಾಲ್ ,ಅಕ್ಷರಶ: ಸ್ಟೇಟ್ಸ್ -ಜನರಲ್ ಎಂದು ಕರೆಯಲಾಗುತ್ತದೆ. ಇದು ಬೈಕ್ಯಾಮರಲ್,ಎರಡು ವಿಭಾಗಗಳಲ್ಲಿ ವಿಭಜಿಸಲ್ಪಟ್ಟಿದೆ;ಒಂದು ಕ್ಯಾಮೆರ್ಸ್ ,ಚೇಂಬರ್ಸ್ ಡಚ್ ನಲ್ಲಿ ಸೆನೇಟ್ ನ್ನು ದಿ ಎರೆಸ್ಟೆ ಕ್ಯಾಮೆರ್ (ಫಸ್ಟ್ ಚೇಂಬರ್ (ಮೊದಲ ಮನೆ) ಮತ್ತು ಅದರ ಸದಸ್ಯರನ್ನು "ಸೆನೇಟೊರೆನ್ ಎನ್ನುತ್ತಾರೆ. ಡಚ್ ನಲ್ಲಿ ದಿ ಹೌಸ್ ಆಫ್ ರಿಪ್ರೆಜಂಟೇಟಿವ್ಸ್ ರನ್ನು ಟ್ವೀಡೆ ಕ್ಯಾಮೆರ್ (ಸೆಕೆಂಡ್ ಚೇಂಬರ್ )ಮತ್ತು ಇದು ಬಹಳ ಪ್ರಮುಖವಾದದ್ದು. ಮಹತ್ವದ ಚರ್ಚೆಗಳು ಇಲ್ಲಿ ನಡೆಯುತ್ತವೆ. ಅದಲ್ಲದೇ ಸೆಕೆಂಡ್ ಚೇಂಬರ್ ಪ್ರಸ್ತಾವಿತ ಕಾನೂನುಗಳನ್ನು ತಿದ್ದುಪಡಿಗಳನ್ನು ಮಾಡಬಹುದು,ಅದು ತನ್ನಷ್ಟಕ್ಕೆ ತಾನೇ ಕಾನೂನು ರಚಿಸಬಹುದಾಗಿದೆ. ಆದರೆ ಸೆನೇಟ್ ಗೆ ಈ ಸಾಮರ್ಥ್ಯಗಳಿರುವುದಿಲ್ಲ. ಅದರ ಕಾರ್ಯಚಟುವಟಿಕೆಯಲ್ಲಿ ಹೆಚ್ಚೆಂದರೆ ಕಾನೂನುಗಳನ್ನು ತಾಂತ್ರಿಕವಾಗಿ ಪರಾಮರ್ಶೆ ಮಾಡಬಹುದು. ಇದು ಒಂದು ಕಾನೂನನ್ನು ಸಮ್ಮತಿಸಬಹುದು ಇಲ್ಲಾ ತಿರಸ್ಕರಿಸಬಹುದಾಗಿದೆ. ಇವೆರಡೂ ಚೇಂಬರ್ ಗಳು ದಿ ಹೇಗ್ಯುನಲ್ಲಿವೆ,ಇದು ಸಂಸತ್ತಿರುವ (ಪಾರ್ಲಿಮೆಂಟ್ ) ಸ್ಥಳವಾಗಿದೆ,ಅದಲ್ಲದೇ ನೆದರ್ ಲ್ಯಾಂಡ್ ನ ರಾಜಧಾನಿಯೂ ಹೌದು.ಅದನ್ನೇ ಆಮ್ ಸ್ಟೆರ್ಡ್ಯಾಮ್ ಎನ್ನುತ್ತಾರೆ.

ಒಟ್ಟು 150 ಸದಸ್ಯರಿರುವ ಹೌಸ್ ಆಫ್ ರಿಪ್ರೆಜೆಂಟೇಟಿವ್ಸ್ ಸಾರ್ವತ್ರಿಕ ಚುನಾವಣೆಗಳ ಮೂಲಕ ಪ್ರತಿ ನಾಲ್ಕುವರ್ಷಕ್ಕೊಮ್ಮೆ ಆಯ್ಕೆಯಾಗುತ್ತದೆ.(ಸರ್ಕಾರ ಬೀಳದಿದ್ದರೆ ಮಾತ್ರ) ಅದರಲ್ಲಿ 75 ಸೆನೆಟ್ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗುತ್ತಾರೆ. ಒಟ್ಟು 12 ಪ್ರಾಂತೀಯ ಪಾರ್ಲಿಮೆಂಟ್ ಗಳ ಸದಸ್ಯರು ಈ ಸೆನೆಟರ್ ಗಳನ್ನು ಆಯ್ಕೆ ಮಾಡುತ್ತಾರೆ. ಒಬ್ಬ ಸದಸ್ಯನ ಮತದ ಮೌಲ್ಯವು ಆತ ಪ್ರತಿನಿಧಿಸುವ ಜನಸಂಖ್ಯೆಯ ಪ್ರಮಾಣವನ್ನು ಅವಲಂಬಿಸಿದೆ. ಪ್ರಾಂತೀಯ ಪಾರ್ಲಿಮೆಂಟ್ ಗಳು ಸ್ಟೇಟ್ಸ್ -ಪ್ರಾಂತೀಯ ಪ್ರದೇಶಗಳಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳು ಈ ಆಯ್ಕೆ ಪ್ರಕ್ರಿಯೆ ನಡೆಸುತ್ತವೆ.

ನಾರ್ವೆ

ನಾರ್ವೆಯಲ್ಲಿ ಪಾರ್ಲಿಮೆಂಟ್ ಸದಸ್ಯರೆಂದರೆ (ಸಂಸದರು)ನಾರ್ವೆಜಿಯನ್ ಪಾರ್ಲಿಮೆಂಟಿಗೆ ಆಯ್ಕೆಯಾದ ಸ್ಟೊರ್ಟಿಂಗ್ ಗೆಟ್ ಎನ್ನುತ್ತಾರೆ. ಈ ಸದಸ್ಯರನ್ನು ಸ್ಟೊರ್ಟಿಂಗ್ಸ್ ರಿಪ್ರೆಜೆಂಟರ್ ಎಂದು ಕರೆಯುತ್ತಾರೆ. ನಾರ್ವೆಯು ಎರಡು ಚೇಂಬರ್ ಗಳ ಪಾರ್ಲಿಮೆಂಟ್ (ಸಂಸತ್ತು)ಆಗಿದ್ದು,ಇದರಲ್ಲಿ ಒಡೆಲ್ ಸ್ಟಿಂಗೆಟ್ ಮತ್ತು ಲ್ಯಾಗ್ ಟಿಂಗೆಟ್ ಗಳನ್ನು ಒಳಗೊಂಡಿದೆ. ಒಡೆಲ್ ಸ್ಟಿಂಗೆಟ್ ಬಹು ಸಂಖ್ಯೆಯ ಪಾರ್ಲಿಮೆಂಟ್ (ಸಂಸತ್ )ಸದಸ್ಯರನ್ನೊಳಗೊಂಡಿದೆ.(ಮೂರ್ನಾಲ್ಕಾಂಶದಷ್ಟು ಅಥವಾ ಒಟ್ಟು 169ರಲ್ಲಿ,127 ಸದಸ್ಯರು) ಲ್ಯಾಗ್ಟಿಂಗೆಟ್ ಕೊನೆಯ ಸದಸ್ಯರ ನಾಲ್ಕನೆಯ ಭಾಗವನ್ನು ಹೊಂದಿದೆ,ಇದನ್ನು ಪಾರ್ಲಿಮೆಂಟ್ ನಲ್ಲಿರುವ ಜನಪ್ರಿಯ ಮತಗಳ ಮೂಲಕ ಪ್ರತಿ (ಸಂಸತ್ತು),ಪಾರ್ಲಿಮೆಂಟ್ ಆರಂಭದ ಅವಧಿಯಲ್ಲಿ ಆಯ್ಕೆ ಮಾಡಲಾಗುತ್ತದೆ.(ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪಾರ್ಲಿಮೆಂಟ್ ಸದಸ್ಯರನ್ನು ಆಯ್ಕೆ ಮಾಡಲಾಗುವುದು) ಇಲ್ಲಿ ಪಾರ್ಲಿಮೆಂಟಿನ ವಿಭಜನೆಯು ಚೇಂಬರ್ ಗಳಲ್ಲಿ ಮಾಡುವ ಉದ್ದೇಶವೆಂದರೆ, ಯಾವುದೇ ಕಾನೂನು ಪಾಸು ಮಾಡುವ ಸಂದರ್ಭ ಮತ್ತು ನ್ಯಾಶನಲ್ ಕೋರ್ಟ್ ರಿಕ್ಸ್ರೆಟ್ ಮೊಕದ್ದಮೆಗಳನ್ನು ಜಾರಿಗೊಳಿಸುವಾಗ ಈ ವಿಭಜನೆ ಉಪಾಯೋಗಕ್ಕೆ ಬರುತ್ತದೆ. ಇನ್ನುಳಿದ ವಿಷಯಗಳಲ್ಲಿ ಅಂದರೆ (ರಾಷ್ಟ್ರೀಯ)ನ್ಯಾಶನಲ್ ಮುಂಗಡ ಪತ್ರ ಜಾರಿ ಮಾಡುವಾಗ ಅಥವಾ ಸಂವಿಧಾನದ ತಿದ್ದುಪಡಿ ವಿಷಯದಲ್ಲಿ(ಇದಕ್ಕೆ ಎರಡು-ಮೂರಾಂಶದಷ್ಟು ಬಹುಮತ ಅಗತ್ಯ)ಈ ಸಂದರ್ಭದಲ್ಲಿ ಚೇಂಬರ್ ಗಳು ಒಮ್ಮತ ಹೊಂದಿರುತ್ತವೆ.

ಪೊಲಂಡ್

ಪೊರ್ಚಗಲ್

ಪೊರ್ಚಗಲ್ ನಲ್ಲಿ ಪಾರ್ಲಿಮೆಂಟ್ ಸದಸ್ಯನನ್ನು ಡೆಪುಟ್ಯಾಡೊ ಎಂದು ಕರೆಯಲಾಗುತ್ತದೆ,ಪ್ರಜಾಪ್ರಭುತ್ವ ಮಾದರಿಯ ಚುನಾವಣೆ ನಂತರ ಇಂತಹ ವ್ಯಕ್ತಿಗಳನ್ನು ಜನರ ಪರವಾಗಿ ಕೆಲಸ ಮಾಡಲು ನೇಮಕ ಮಾಡಲಾಗುತ್ತದೆ. ಈ ಪಾರ್ಲಿಮೆಂಟ್ (ಸಂಸತ್ತು)ಅಸೆಂಬ್ಲಿಯಾ ಡಾ ರಿಪಬ್ಲಿಕಾ ಎನ್ನಲಾಗುತ್ತದೆ.

ಸ್ವಿಡನ್

ಸ್ವಿಡನ್ ನಲ್ಲಿ ಮೆಂಬರ್ಸ್ ಆಫ್ ಪಾರ್ಲಿಮೆಂಟ್ (ಸಂಸತ್ ಸದಸ್ಯರು)ಅಂದರೆ ಪಾರ್ಲಿಮೆಂಟ್ ಆಫ್ ಸ್ವಿಡನ್ ಗೆ ಚುನಾಯಿತರಾದ ಸದಸ್ಯರುಸ್ವೀಡಿಶ್:Sveriges riksdagಎನ್ನಲಾಗುತ್ತದೆ. ಸ್ವಿಡನ್ ನಲ್ಲಿ ಒಬ್ಬ MP ಯನ್ನು ಸಾಮಾನ್ಯವಾಗಿ ರಿಕ್ಸ್ ಡ್ಯಾಗ್ಸಲೆಡ್ಯಾಮೊಟ್ ಅಥವಾ ಒಬ್ಬ ರಿಕ್ಸ್ ಡ್ಯಾಗ್ಸಲೆಡ್ಯಾಗ್ಸ್ ಮ್ಯಾನ್ ಎಂದು ಹೇಳಲಾಗುತ್ತದೆ.ಮೊದಲನೆಯದನ್ನು ಸಾರ್ವತ್ರಿಕವಾಗಿ ಬಳಸಲಾಗುತ್ತದೆ,ಇಂದು ಅಫಿಸಿಯಲ್ ಅಧಿಕೃತ ವ್ಯವಹಾರಗಳಲ್ಲಿ ಇದನ್ನು ಬಳಸಲಾಗುತ್ತದೆ.ಇದರ ಕಾರಣದಿಂದಾಗಿ ಈ ಶಬ್ದವು ಲಿಂಗ ಭೇದವಿಲ್ಲದೇ ಬಳಕೆಯಾಗುತ್ತದೆ.ಆದರೆ ಕೊನೆಯ ಪದವನ್ನು ಐತಿಹಾಸಿಕವಾಗಿ ಮತ್ತು ಅಕ್ಷರಶಹ: ಪುರುಷ MP ಗೆ ಮಾತ್ರ ಬಳಸಲಾಗುತ್ತದೆ).

ಈ (ಸಂಸತ್ತು)ಪಾರ್ಲಿಮೆಂಟ್ ಒಂದು ಏಕಸಭಾಶಾಸನ ಸಭೆಯಾಗಿದೆ,ಒಟ್ಟು 349 ಸದಸ್ಯರನ್ನು ಹೊಂದಿರುವ ಇಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಒಬ್ಬ ವ್ಯಕ್ತಿ MP ಆಗಬೇಕಿದ್ದರೆ ,ಆತನಿಗೆ ಮತದಾನದ ಹಕ್ಕಿರಬೇಕು,(ಅಂದರೆ ಸ್ವಿಡಿಶ್ ನಾಗರಿಕನಾಗಿರಬೇಕು,ಕನಿಷ್ಟ 18ವರ್ಷ ವಯಸ್ಸಾಗಿರಬೇಕು; ಮತ್ತು ಸ್ವಿಡನ್ ನ ನಿವಾಸಿಯಾಗಿರಬೇಕು.)ಅದಲ್ಲದೇ ಆತ ರಾಜಕೀಯ ಪಕ್ಷವೊಂದರಿಂದ [೧೦] ನಾಮಕರಣಗೊಂಡಿರಬೇಕು.

MP ಗಳ ಸಂಬಳವು ರಿಕ್ಸ್ ಡ್ಯಾಗ್ ಪೇ ಕಮೀಶನ್ (ವೇತನ ಆಯೋಗ)ನಿಂದ ನಿರ್ಧರಿಸಲ್ಪಡುತ್ತದೆ. (ರಿಕ್ಸ್ ಡ್ಯಾಜೆನ್ಸ್ ಅರ್ವೊಡೆನಾಮಂಡ್ )ಇದು ಸರ್ಕಾರಿ ಅಂಗಸಂಸ್ಥೆಯಾಗಿ ಪಾರ್ಲಿಮೆಂಟಿನ ಕೆಳಗೆ ಕೆಲಸ ಮಾಡುತ್ತದೆ. ಕಳೆದ 1 ನವೆಂಬರ್ 2007ರಿಂದ MP ಯೊಬ್ಬರ ಮೂಲವೇತನವು ಪ್ರತಿ ತಿಂಗಳುSEK52,900 (ca.ರಷ್ಟಾಗಿರುತ್ತದೆ. US$8,300). ಸ್ಪೀಕರ್ (ಸಭಾಧ್ಯಕ್ಷ)ಅವರ ಸಂಬಳವು ಪ್ರತಿ ತಿಂಗಳು SEK126,000, US$20,000),(ca.ರಷ್ಟಿರುತ್ತದೆ. ಇದು ಪ್ರಧಾನ ಮಂತ್ರಿಗಳ ಸಂಬಳಕ್ಕೆ [೧೧] ಸಮನಾಗಿರುತ್ತದೆ. ಡೆಪ್ಯುಟಿ ಸ್ಪೀಕರ್ ಗಳು ಒಬ್ಬ ಸದಸ್ಯನ ಸಂಬಳದ 30%ರಷ್ಟನ್ನು ಹೆಚ್ಚುವರಿ ಮೊತ್ತವನ್ನಾಗಿ ಪಡೆಯುತ್ತಾರೆ. ಪಾರ್ಲಿಮೆಂಟರಿ ಕಮೀಟಿ ಅಧ್ಯಕ್ಷರು ಹಾಗು ಉಪಾಧ್ಯಕ್ಷರು ಅದೇ ತೆರನಾದ 20%ರಿಂದ 15%ರಷ್ಟು ಅನುಕ್ರಮವಾಗಿರುವ ಹೆಚ್ಚಳ [೧೨] ಪಡೆಯುತ್ತಾರೆ.

ಸಮಾಜಶಾಸ್ತ್ರಜ್ಞ ಜೆನ್ನಿ ಹ್ಯಾನ್ಸನ್ ನ ತನಿಖಾ ಅಧ್ಯಯನದ ಪ್ರಕಾರ ಸ್ವೆಡಿಶ್ ನ್ಯಾಶನಲ್ ಪಾರ್ಲಿಮೆಂಟ್ ಸದಸ್ಯರು ಸರಾಸರಿ ವಾರದಲ್ಲಿ ಸುಮಾರು 66ಗಂಟೆಗಳ ಕಾಲ ಕೆಲಸ ಮಾಡುತ್ತಾರೆ,ಇದರಲ್ಲಿ ಅವರ ಹೆಚ್ಚುವರಿ ಜವಾಬ್ದಾರಿಯೂ ಸೇರಿರುತ್ತದೆ. ಹ್ಯಾನ್ಸನ್ ನ ಮುಂದುವರೆದ ಸಂಶೋಧನೆ ಪ್ರಕಾರ ಸ್ವಿಡಿಶ್ ನ್ಯಾಶನಲ್ ಸಂಸದನೊಬ್ಬ ಸರಾಸರಿ ಪ್ರತಿ ರಾತ್ರಿ 6.5ಗಂಟೆಗಳ ಕಾಲ ನಿದ್ರಿಸುತ್ತಾನೆ.

ಥೈಲ್ಯಾಂಡ್

ಕಿಂಗಡಮ್ ಆಫ್ ಥೈಲ್ಯಾಂಡ್ ನಲ್ಲಿ ಪಾರ್ಲಿಮೆಂಟ್ ಮೆಂಬರ್ ಗಳು (สมาชิกสภาผู้แทนราษฎร ಅಥವಾ ส.ส.) ನ ಉಲ್ಲೇಖಿತ ಚುನಾಯಿತ ಮೆಂಬರ್ಸ್ ಆಫ್ ದಿ ನ್ಯಾಶನಲ್ ಅಸೆಂಬ್ಲಿ ಆಫ್ ಥೈಲ್ಯಾಂಡ್ಆಗಿರುತ್ತಾರೆ. ಕಳೆದ ಸೆಪ್ಟೆಂಬರ್ 29.2006ರ ಮಿಲಿಟರಿಯ ಕ್ಷಿಪ್ರ ಕ್ರಾಂತಿ ಡಿ ಟ್ಯಾಟ್ ನ ನಂತರ ಅದರ ಎಲ್ಲಾ 500 ಸದಸ್ಯರು ಮುಂದಿನ ಚುನಾವಣೆಗಳ ತನಕ ತಮ್ಮ ಕರ್ತವ್ಯದಿಂದ ಅಮಾನತುಪಡಿಸಿಕೊಂಡಿದ್ದಾರೆ. ದಿ ಹೌಸ್ ಆಫ್ ರಿಪ್ರಜೇಂಟೇಟಿವ್ಸ್ ಆಫ್ ಥೈಲ್ಯಾಂಡ್, ಸಾರ್ವತ್ರಿಕ ಚುನಾವಣೆಗಳ ಮೂಲಕ ಹೊಸ ಸಂವಿಧಾನದಡಿ ಸಂಪೂರ್ಣ ಮರು ರಚನೆ ಕಂಡಿದೆ. 2007ರ ಸಂವಿಧಾನದ ಪ್ರಕಾರ ಒಟ್ಟು 480 ಪಾರ್ಲಿಮೆಂಟ್ ಸದಸ್ಯರು,ಅದರಲ್ಲಿ 400 ಸದಸ್ಯರು ಮತಕ್ಷೇತ್ರಗಳಿಂದ ಚುನಾಯಿತರಾದರೆ ಇನ್ನುಳಿದ 80ಸದಸ್ಯರು ಪಕ್ಷದ ಪಟ್ಟಿ ಮೂಲಕ ನಿರ್ಧರಿಸಲ್ಪಡುತ್ತಾರೆ.

ಟರ್ಕಿ

ರಿಪಬ್ಲಿಕ್ ಆಫ್ ಟರ್ಕಿಯು ಸ6ಬಂಧಿಸಿದಂತೆ ಮೆಂಬರ್ ಆಫ್ ಪಾರ್ಲಿಮೆಂಟ್ ಅಂದರೆ ಟರ್ಕಿಶ್ ಗ್ರಾಂಡ್ ನ್ಯಾಶನಲ್ ಅಸೆಂಬ್ಲಿಯ TGNA ಚುನಾಯಿತ ಸದಸ್ಯರಾಗಿರುತ್ತಾರೆ.ಇಲ್ಲಿ ಒಟ್ಟು 550 ಸದಸ್ಯರು ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾಯಿತರಾಗಿ ನಾಲ್ಕು ವರ್ಷಗಳ ಕಾಲ Turkish: Error: {{Lang}}: text has italic markup (help)ಸದಸ್ಯರಾಗಿರುತ್ತಾರೆ.

ಇವನ್ನೂ ನೋಡಿ

Page ಮಾಡ್ಯೂಲ್:Portal/styles.css has no content.

ಅಡಿ ಬರಹಗಳು

  1. ಪಾರ್ಲಿಮೆಂಟರಿ ವಿಷಯಗಳ ಪಟ್ಟಿ ಇಂಟರ್ ಮಿಡಿಯೇಟ್ ಸ್ಟುಡಂಟ್ಸ್ ಗೆ ನಿಯಮಾವಳಿ Archived 2008-04-20 ವೇಬ್ಯಾಕ್ ಮೆಷಿನ್ ನಲ್ಲಿ. ಪಾರ್ಲಿಮೆಂಟ್ ಆಫ್ ಕೆನಡಾ
  2. ದಿ ನ್ಯಾಶನಲ್ ಅಸೆಂಬ್ಲಿ Archived 2010-05-22 ವೇಬ್ಯಾಕ್ ಮೆಷಿನ್ ನಲ್ಲಿ. ಪಾರ್ಲಿಮೆಂಟ್ ಆಫ್ ದಿ ರಿಪಬ್ಲಿಕ್ ಆಫ್ ಕೀನ್ಯ
  3. "UK ಪಾರ್ಲಿಮೆಂಟ್". Archived from the original on 2013-10-29. Retrieved 2010-06-02.
  4. ಎಲೆಕ್ಟೊರಲ್ ಅಡ್ಮಿನಿಸ್ಟೇಶನ್ ಆಕ್ಟ್ 2006 ಆಫಿಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ ಫಾರ್ಮೇಶನ್
  5. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ನೋಡಿ ರೆಸಿಗ್ನೇಶನ್ ಫ್ರಾಮ್ ದಿ ಬ್ರಿಟಿಶ್ ಹೌಸ್ ಆಫ್ ಕಾಮನ್ಸ್
  6. MP ಗಳ ದುಂದು ವೆಚ್ಚಕ್ಕಾಗಿ ತೆರಿಗೆದಾರ ಸುಮಾರು £118,000 ಮೊತ್ತ ಸರಾಸರಿ ನೀಡಬೇಕಾಗುತ್ತದೆ. ದಿ ಗಾರ್ಡಿಯನ್, 22 ಅಕ್ಟೋಬರ್ 2004
  7. "UK ಪಾರ್ಲಿಮೆಂಟ್". Archived from the original on 2010-03-08. Retrieved 2010-06-02.
  8. MP ಗಳ ಪಿಂಚಣಿ ಹಣ ನೀಡಲು ತೆರಿಗೆದಾರರು ದಶಲಕ್ಷಗಟ್ಟಲೆ ಹಣ ಕೊಡಬೇಕಾಗುತ್ತದೆ. ಮೇಲ್ ಆನ್ ಲೈನ್, 31 ಮಾರ್ಚ್ 2006
  9. ೯.೦ ೯.೧ ಹೌಸ್ ಆಫ್ ಲಾರ್ಡ್ಸ್ ರಿಫಾರ್ಮ್ Archived 2006-01-03 ವೇಬ್ಯಾಕ್ ಮೆಷಿನ್ ನಲ್ಲಿ. UK ಪಾರ್ಲಿಮೆಂಟ್
  10. "Members and parties". Parliament of Sweden. 3 October 2006. Retrieved 6 January 2008.
  11. "Pay and economic benefits". Parliament of Sweden. 1 November 2007. Archived from the original on 22 ಆಗಸ್ಟ್ 2007. Retrieved 6 January 2008.
  12. "Members' pay". Parliament of Sweden. 13 July 2007. Archived from the original on 13 ಜೂನ್ 2007. Retrieved 6 January 2008.