Lua error in package.lua at line 80: module 'Module:Pagetype/setindex' not found.
Salzburg | |
---|---|
Country | Austria |
State | Salzburg |
District | Statutory city |
Government | |
• Mayor | Heinz Schaden (SPÖ) |
Area | |
• Total | ೬೫.೬೭೮ km೨ (೨೫.೩೫೮ sq mi) |
Elevation | ೪೨೪ m (೧,೩೯೧ ft) |
Population (ದೋಷ: ಅಮಾನ್ಯ ಸಮಯ.)[೧] | |
• Total | ಟೆಂಪ್ಲೇಟು:Get Austria population |
Time zone | UTC+1 (CET) |
• Summer (DST) | UTC+2 (CEST) |
Postal code | 5020 |
Area code | 0662 |
Vehicle registration | S |
Website | www.stadt-salzburg.at |
Historic Centre of the City of Salzburg | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | ii, iv, vi |
ಉಲ್ಲೇಖ | 784 |
ಯುನೆಸ್ಕೊ ಪ್ರದೇಶ | Europe and North America |
ದಾಖಲೆಯ ಇತಿಹಾಸ | |
Inscription | 1996 (20th ಸಮಾವೇಶ) |
Salzburg (ಸಹಾಯ·ಮಾಹಿತಿ) ಇದು (Austro-Bavarian: Error: {{Lang}}: text has italic markup (help); ಶಬ್ಧಶಃ: "ಉಪ್ಪಿನ ನಗರ") ಆಸ್ಟ್ರಿಯಾದಲ್ಲಿ ನಾಲ್ಕನೇ ದೊಡ್ಡ ನಗರ ಮತ್ತು ಸಾಲ್ಜ್ಬರ್ಗ್ನ ಸಂಯುಕ್ತ ರಾಜ್ಯವಾಗಿದೆ.
ಸಾಲ್ಜ್ಬರ್ಗ್ನ "ಹಳೆಯ ನಗರ" (ಆಲ್ಟ್ಸ್ಟಾಟ್ ) ಆಗಿದ್ದು ಅಂತರಾಷ್ಟ್ರೀಯವಾಗಿ ಬರೋಕ್ ವಾಸ್ತುಶಿಲ್ಪಕ್ಕಾಗಿ ಮತ್ತು ಉತ್ತರ ಆಲ್ಪ್ಸ್ ನಗರದ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ನಗರವೆಂದು ಪ್ರಖ್ಯಾತಿ ಪಡೆದಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ 1997ರಲ್ಲಿ ಸೇರಿಸಲಾಗಿದೆ. ಈ ನಗರವು ಅದರ ಆಫೈನ್(ಉನ್ನತ ಪರ್ವತ)ದ ಪರಿಸರಕ್ಕಾಗಿ ಪ್ರಸಿದ್ಧಿಯಾಗಿದೆ.
18ನೇ ಶತಮಾನದ ಸಂಗೀತ ಸಂಯೋಜಕ ವೋಲ್ಫ್ಗ್ಯಾಂಗ್ ಅಮಡೇಸ್ ಮೊಜಾರ್ಟ್ ಸಾಲ್ಜ್ಬರ್ಗ್ನಲ್ಲಿ ಜನಿಸಿದನು. 20ನೇ ಶತಮಾನದ ಮಧ್ಯದಲ್ಲಿ, ನಗರವನ್ನು ಅಮೇರಿಕಾದ ಸಂಗೀತಮಯ ಸಿನಿಮಾವಾದ ದ ಸೌಂಡ್ ಆಫ್ ಮ್ಯೂಸಿಕ್ ನ ಭಾಗಗಳಿಗಾಗಿ ಸಂಯೋಜಿಸಲ್ಪಟ್ಟಿತು, ಇದು ಆಸ್ಟ್ರಿಯಾದ ಪ್ರಮುಖ ಹೆಗ್ಗುರುತಾಗಿದೆ. ಸಂಗೀತಮಯ ಚಿತ್ರವು ರಿಚರ್ಡ್ ರಾಜರ್ಸ್ ಮತ್ತು ಆಸ್ಕರ್ ಹಮ್ಮರ್ಸ್ಟೈನ್ IIರ ಸಹಭಾಗಿತ್ವದಲ್ಲಿ ನಿರ್ಮಾಣವಾಯಿತು.
ಸಾಲ್ಜ್ಬರ್ಗ್ ರಾಜ್ಯದ ರಾಜಧಾನಿ (ಲ್ಯಾಂಡ್ ಸಾಲ್ಜ್ಬರ್ಗ್ ) ಮೂರು ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಇದು ದೊಡ್ಡ ಯುವ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದು ಆ ಪ್ರದೇಶಕ್ಕೆ ಚೈತನ್ಯ ಮತ್ತು ಉತ್ಸಾಹವನ್ನು ತುಂಬುತ್ತಾರೆ, ಮತ್ತು ವಿಶ್ವವಿದ್ಯಾಲಯಗಳು ಆ ಸಮುದಾಯಕ್ಕೆ ಸಂಸ್ಕಾರವನ್ನು ನೀಡುತ್ತಾರೆ.
ಸಾಲ್ಜ್ಬರ್ಗ್ ಸಾಲ್ಜಾಕ್ ನದಿಯ ಒಂದು ದಡದಲ್ಲಿದೆ ಮತ್ತು ಆಲ್ಪ್ಸ್ನ ಉತ್ತರ ಗಡಿಯಲ್ಲಿದೆ. ಸಾಲ್ಜ್ಬರ್ಗ್ನ ದಕ್ಷಿಣದಲ್ಲಿ ಪರ್ವತಗಳಿದ್ದು ಉತ್ತರದಲ್ಲಿ ಸಮತಟ್ಟಾದ ಪ್ರದೇಶವನ್ನು ಹೊಂದಿದೆ. ಆಲ್ಫೈನ್ ಶಿಖರಕ್ಕೆ ಹತ್ತಿರವಾದ— 1972 ಮೀಯ ಅಂಟರ್ಸ್ಬರ್ಗ್—ನಗರ ಕೇಂದ್ರಭಾಗದಿಂದ ಕೆಲವು ಕಿಲೋಮೀಟರುಗಳ ದೂರದಲ್ಲಿದೆ. ಆಲ್ಟ್ಸ್ಟಾಟ್ , ಅಥವಾ "ಹಳೆಯ ನಗರ"ವು ಬರೋಕ್ ಗೋಪುರಗಳು ಮತ್ತು ಚರ್ಚುಗಳು ಮತ್ತು ಬೃಹತ್ತಾದ ಫೆಸ್ಟಂಗ್ ಹೊಹೆನ್ಸಾಲ್ಜ್ಬರ್ಗ್ ನಿಂದ ತುಂಬಿದೆ. ಈ ಪ್ರದೇಶವು ಎರಡು ಚಿಕ್ಕ ಪರ್ವತಗಳನ್ನು ಹೊಂದಿದೆ,ಮೂಂಚ್ಸ್ಬರ್ಗ್ ಮತ್ತು ಕಪುಜಿನೆರ್ಬರ್ಗ್ , ಇವುಗಳು ನಗರದ ಹಸಿರು ಶ್ವಾಸಕೋಶಗಳಂತೆ ವರ್ತಿಸುತ್ತವೆ. ಸುಮಾರು ಮುನಿಚ್ನ 150 ಕಿಮೀ ಪೂರ್ವಭಾಗದಲ್ಲಿ , ಲೂಬ್ಲಿಯಾನ 281 ಕಿಮೀ ವಾಯವ್ಯದಲ್ಲಿ ಮತ್ತು ವಿಯೆನ್ನಾದ 300 ಕಿಮೀ ಪಶ್ಚಿಮದಲ್ಲಿ ಸಾಲ್ಜ್ಬರ್ಗ್ ನೆಲೆಸಿದೆ.
ಸಾಲ್ಜ್ಬರ್ಗ್ನ ಹವಾಮಾನವು ತಂಪಾಗಿದೆ ಮತ್ತು ಆರ್ದವಾಗಿದೆ (ಕೊಪೆನ್ ಸಿಎಫ್ಬಿ ).
Salzburg-Flughafen (LOWS)ದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 16.3 (61.3) |
21.7 (71.1) |
24.9 (76.8) |
27.9 (82.2) |
32.2 (90) |
35.6 (96.1) |
37.7 (99.9) |
35.6 (96.1) |
32.1 (89.8) |
28.2 (82.8) |
23.5 (74.3) |
18.6 (65.5) |
37.7 (99.9) |
ಅಧಿಕ ಸರಾಸರಿ °C (°F) | 3.2 (37.8) |
5.6 (42.1) |
10.4 (50.7) |
14.3 (57.7) |
19.9 (67.8) |
22.2 (72) |
24.4 (75.9) |
24.2 (75.6) |
20.1 (68.2) |
14.8 (58.6) |
7.8 (46) |
4.0 (39.2) |
14.2 (57.6) |
Daily mean °C (°F) | −0.8 (30.6) |
0.7 (33.3) |
4.8 (40.6) |
8.5 (47.3) |
13.8 (56.8) |
16.5 (61.7) |
18.6 (65.5) |
18.3 (64.9) |
14.3 (57.7) |
9.3 (48.7) |
3.6 (38.5) |
0.4 (32.7) |
9.0 (48.2) |
ಕಡಮೆ ಸರಾಸರಿ °C (°F) | −4.0 (24.8) |
−2.9 (26.8) |
0.7 (33.3) |
3.8 (38.8) |
8.4 (47.1) |
11.5 (52.7) |
13.5 (56.3) |
13.5 (56.3) |
10.1 (50.2) |
5.5 (41.9) |
0.6 (33.1) |
−2.5 (27.5) |
4.9 (40.8) |
Record low °C (°F) | −25.4 (−13.7) |
−21.8 (−7.2) |
−21.6 (−6.9) |
−3.9 (25) |
−2.1 (28.2) |
2.0 (35.6) |
3.7 (38.7) |
4.3 (39.7) |
−1.6 (29.1) |
−8.0 (17.6) |
−17.8 (0) |
−26.8 (−16.2) |
−26.8 (−16.2) |
Average precipitation mm (inches) | 59.9 (2.358) |
54.7 (2.154) |
78.7 (3.098) |
83.1 (3.272) |
114.5 (4.508) |
154.8 (6.094) |
157.5 (6.201) |
151.3 (5.957) |
101.3 (3.988) |
72.6 (2.858) |
83.0 (3.268) |
72.8 (2.866) |
೧,೧೮೪.೨ (೪೬.೬೨೨) |
Average snowfall cm (inches) | 24.0 (9.45) |
23.9 (9.41) |
21.7 (8.54) |
2.9 (1.14) |
0.1 (0.04) |
0 (0) |
0 (0) |
0 (0) |
0 (0) |
0 (0) |
12.1 (4.76) |
27.8 (10.94) |
112.5 (44.29) |
Average precipitation days | 10.1 | 9.5 | 11.9 | 11.8 | 12.1 | 15.0 | 14.4 | 13.2 | 10.8 | 9.3 | 10.8 | 11.8 | 140.7 |
Average snowy days | 15.4 | 11.7 | 6.1 | 1.4 | 0 | 0 | 0 | 0 | 0 | 0.1 | 5.1 | 13.1 | 52.9 |
Mean sunshine hours | 67.0 | 91.9 | 130.0 | 152.6 | 196.4 | 193.9 | 221.1 | 202.8 | 167.7 | 129.7 | 81.2 | 62.8 | ೧,೬೯೭.೧ |
Source: Central Institute for Meteorology and Geodynamics[೨] |
1935ರಲ್ಲಿ ಸಾಲ್ಜ್ಬರ್ಗ್ ಅಕ್ಕಪಕ್ಕದ ಪುರಸಭೆಗಳನ್ನಾಕ್ರಮಿಸಿದ್ದರಿಂದ ಜನಸಂಖ್ಯೆಯು ತೀವ್ರವಾಗಿ ಹೆಚ್ಚಿತು. ವಿಶ್ವ ಸಮರ IIರ ನಂತರ ಅನೇಕ ನಿರಾಶ್ರಿತರು ಈ ನಗರದಲ್ಲಿ ನೆಲೆಸಿದರು. ಯುದ್ಧಾನಂತರದ ಅಮೇರಿಕಾದ ಸೈನಿಕರ ಆಶ್ರಯಕ್ಕಾಗಿ ಹೊಸ ವಾಸಯೋಗ್ಯ ಸ್ಥಳಗಳನ್ನು ನಿರ್ಮಿಸಲಾಯಿತು, ಅವರು ತೊರೆದ ನಂತರ ನಿರಾಶ್ರಿತರಿಗಾಗಿ ಆ ಸ್ಥಳವನ್ನು ಬಳಸಲಾಯಿತು. 1950ರ ಸುಮಾರಿನಲ್ಲಿ ಸಾಲ್ಜ್ಬರ್ಗ್ 100,000ಕ್ಕೂ ಹೆಚ್ಚು ಪ್ರಜೆಗಳನ್ನು ಹೊಂದಿತ್ತು, ಮತ್ತು 2006ರ ವೇಳೆಗೆ 150,000 ಪ್ರಜೆಗಳನ್ನು ಹೊಂದಿತ್ತು. 2007ರಲ್ಲಿ ಒಟ್ಟು, ಸುಮಾರು 210,000 ಪ್ರಜೆಗಳು ವಾಸವಿದ್ದರು.[ಸೂಕ್ತ ಉಲ್ಲೇಖನ ಬೇಕು]
Year | Pop. | ±% |
---|---|---|
1869 | ೨೭,೮೫೮ | — |
1880 | ೩೩,೨೪೧ | +19.3% |
1890 | ೩೮,೦೮೧ | +14.6% |
1900 | ೪೮,೯೪೫ | +28.5% |
1910 | ೫೬,೪೨೩ | +15.3% |
1923 | ೬೦,೦೨೬ | +6.4% |
1934 | ೬೯,೪೪೭ | +15.7% |
1939 | ೭೭,೧೭೦ | +11.1% |
1951 | ೧,೦೨,೯೨೭ | +33.4% |
1961 | ೧,೦೮,೧೧೪ | +5.0% |
1971 | ೧,೨೯,೯೧೯ | +20.2% |
1981 | ೧,೩೯,೪೨೬ | +7.3% |
1991 | ೧,೪೩,೯೭೮ | +3.3% |
2001 | ೧,೪೨,೬೬೨ | −0.9% |
2008 | ೧,೪೯,೨೦೧ | +4.6% |
Source: Statistik Austria |
ಈ ಪ್ರದೇಶದಲ್ಲಿ ನಿಯೊಲಿಟಿಕ್ ಯುಗದಲ್ಲಿ ಮಾನವ ವಸತಿಯ ಕುರುಹುಗಳು ಕಂಡುಬಂದಿತು. ಸಾಲ್ಜ್ಬರ್ಗ್ ಮೊದಲ ವಸತಿಯು ಕೆಲ್ಟ್ರಿಂದ ಆರಂಭವಾಯಿತು.
ಕ್ರಿಪೂ.15ರಲ್ಲಿ ರೋಮನ್ ಸಾಮ್ರಾಜ್ಯದಿಂದ ಪ್ರತ್ಯೇಕ ವಸಾಹತುಗಳು ಸಮ್ಮಿಶ್ರಗೊಂಡವು. ಆ ಸಮಯದಲ್ಲಿ ನಗರವನ್ನು ಜುವವುಮ್ ಎಂದು ಕರೆಯುತ್ತಿದ್ದರು ಮತ್ತು ಕ್ರಿಶ.45ರಲ್ಲಿ ರೋಮನ್ ಮಿನಿಸಿಪಿಯಮ್ ಸ್ಥಾನಕ್ಕೇರಿತು. ಜುವವುಮ್ ನೊರಿಕಮ್ನ ರೋಮನ್ ಪ್ರಾಂತ್ಯದ ಪ್ರಮುಖ ಪ್ರದೇಶವಾಗಿದೆ. ನೊರಿಕನ್ ಗಡಿಯ ಪತನದ ನಂತರ, ಜುವವುಮ್ ಅವನತಿ ಹೊಂದಿತು ಮತ್ತು 7ನೇ ಶತಮಾನದ ಅಂತ್ಯದಲ್ಲಿ ನಾಮಾವಶೇಷವಾಯಿತು.
ನಗರದ ಪುನರ್ನಿರ್ಮಾಣದ ಕೀರ್ತಿಯು ಲೈಫ್ ಆಫ್ ಸೈಂಟ್ ರುಪೆರ್ಟ್ ಆದ 8ನೇ ಶತಮಾನದ ಸಂತನಿಗೆ ಸಲ್ಲುತ್ತದೆ. c. 700ರಲ್ಲಿ ಬವೇರಿಯಾದ ಥಿಯೊಡೊ ರುಪೆರ್ಟ್ನಿಗೆ ಬಿಶಪ್ ಆಗಲು ಕೇಳಿದಾಗ, ರುಪೆರ್ಟ್ ತನ್ನ ಬ್ಯಾಸಿಲಿಕಾ(ಸಾರ್ವಜನಿಕ ಗೃಹ)ವಾಗಿ ನದಿಯ ಈ ಸ್ಥಳವನ್ನು ಅನ್ವೇಷಿಸಿದನು. ರುಪೆರ್ಟ್ ಜುವವುಮ್ನ್ನು ಆಯ್ಕೆ ಮಾಡಿ, ಪಾದಿಗಳನ್ನು ಅಧಿಕೃತವಾಗಿ ನೇಮಿಸಿದನು,ಮತ್ತು ಪೈಡಿಂಗ್ನ್ನು ಆ ಪ್ರದೇಶಕ್ಕೆ ಸೇರಿಸುತ್ತಾರೆ. ರುಪೆರ್ಟ್ ಆ ನಗರಕ್ಕೆ "ಸಾಲ್ಜ್ಬರ್ಗ್" ಎಂದು ಹೆಸರಿಟ್ಟನು. ಪಾಗನ್ರನ್ನು ಕ್ರಿಸ್ತ ಧರ್ಮಕ್ಕೆ ಪರಿವರ್ತಿಸಲು ಸಂಚರಿಸಿದನು.
ಸಾಲ್ಜ್ಬರ್ಗ್ ಹೆಸರಿನ ಅರ್ಥವೆಂದರೆ "ಉಪ್ಪಿನ ಕೋಟೆ". ಸಾಲ್ಜಾಕ್ ನದಿಯಲ್ಲಿ ದೋಣಿಯ ಮೂಲಕ ಉಪ್ಪನ್ನು ಸಾಗಿಸುತ್ತಿದ್ದುದರಿಂದ ಆ ಹೆಸರು ಬಂದಿತು, 8ನೇ ಶತಮಾನದಲ್ಲಿ ಸುಂಕ ಸಂಗ್ರಹವನ್ನಾರಂಭವಾಯಿತು, ಇದು ಯುರೋಪಿನ ನದಿಗಳಲ್ಲಿನ ಅನೇಕ ಸಮುದಾಯ ಮತ್ತು ನಗರದ ವಾಡಿಕೆಯಾಗಿತ್ತು.
ನಗರದ ಕೋಟೆಯಾದ ಫೆಸ್ಟಂಗ್ ಹೊಹೆನ್ಸಾಲ್ಜ್ಬರ್ಗ್ನ್ನು 1077ರಲ್ಲಿ ನಿರ್ಮಿಸಲಾಯಿತು ಮತ್ತು ನಂತರದಲ್ಲಿ ವಿಸ್ತರಿಸಲಾಯಿತು.
14ನೇ ಶತಮಾನದ ಅಂತ್ಯದಲ್ಲಿ ಬವೇರಿಯಾದಿಂದ ಸ್ವತಂತ್ರವಾಯಿತು. ಸಾಲ್ಜ್ಬರ್ಗ್ ಇದು ಆರ್ಚ್ಬಿಷಪ್ರ ಕಚೇರಿ ಇರುವ ಸ್ಥಳವಾಗಿತ್ತು. ರೋಮನ್ ಸಾಮ್ರ್ಯಾಜ್ಯದ ರಾಜ ಬಿಷಪ್ ರ ಕಚೇರಿ ಇದ್ದ ಸ್ಥಳ ಕೂಡಾ ಇದಾಗಿತ್ತು.
ಅಕ್ಟೋಬರ್ 31, 1731ರಂದು, ಮಾರ್ಟಿನ್ ಲೂಥರ್ನ 214ರ ವಾರ್ಷಿಕೋತ್ಸವದಲ್ಲಿ ವಿಟ್ಟನ್ಬರ್ಗ್ ಸ್ಕೂಲ್ಗಾಗಿ, ತನ್ನ 95 ಕ್ಷೇತ್ರ ಕಾರ್ಯದ ವಿವರವನ್ನು ರೋಮನ್ ಕ್ಯಾಥೊಲಿಕ್ ಆರ್ಚ್ಬಿಷಪ್ ಕೌಂಟ್ ಲಿಯೋಪಾರ್ಡ್ ಆಂಟನ್ ವೊನ್ ಫಿರ್ಮಿಯಾನ್ ದೇಶಾಂತರ ಪ್ರಯಾಣದ ವಲಸೆ ಪೆಟೆಂಟ್ ಗೆ ಸಹಿ ಮಾಡಿದರು. ಇದರ ಪ್ರಕಾರ ಎಲ್ಲ ಪ್ರೊಟೆಸ್ಟಂಟರು ತಮ್ಮ ಕ್ಯಾಥೋಲಿಕ್ ವಿರೋಧ ನಂಬಿಕೆಗಳನ್ನು ಬಿಡದಿದ್ದಲ್ಲಿ. ಅವರನ್ನು ನಗರದಿಂದ ಹೊರಹಾಕಲು ಒಪ್ಪಿಗೆಯನ್ನು ಇದು ಹೊಂದಿತ್ತು. (ಇದನ್ನು ಯುರೋಪಿನ ಅನೇ ನಗರಗಳಲ್ಲಿ ಅನೇಕ ಜ್ಯೂಗಳ ವಿರುದ್ಧವಾಗಿ ಪ್ರಕಟಿಸಿದ ಉಚ್ಛಾಟನೆಯ ರಾಜಶಾಸನದೊಂದಿಗೆ ಗೊಂದಲಕ್ಕೊಳಗಾಗೆಬೇಕಿಲ್ಲ.)
ಭೂಮಿಯ ಮಾಲೀಕರು ಪ್ರದೇಶವನ್ನು ಮಾರಲು ಮತ್ತು ತೊರೆಯಲು ಎರಡು ದಿನಗಳ ಗಡುವನ್ನು ನೀಡಿದರು. ದನ, ಕುರಿ, ಪೀಟೋಪಕರಣಗಳು ಮತ್ತು ಭೂಮಿಯನ್ನು ಮಾರುಕಟ್ಟೆಯಲ್ಲಿ ಎಸೆಯಲಾಯಿತು, ಮತ್ತು ಸಲ್ಜ್ಬರ್ಗಿನ ಜನರು ವಾನ್ ಫಿರ್ಮಿಯಾನ್ರ ಕ್ಯಾಥೊಲಿಕ್ ಒಕ್ಕೂಟದವರಿಂದ ಸ್ವಲ್ಪ ಹಣವನ್ನು ಪಡೆದರು. ವಾನ್ ಫಿರ್ಮಿಯಾನ್ ವಶಪಡಿಸಿಕೊಂಡ ಭೂಮಿಯಲ್ಲಿ ಹೆಚ್ಚಿನದನ್ನು ತನ್ನ ಕುಟುಂಬದವರಿಗೆ ಹಂಚಿದನು ಮತ್ತು ಪ್ರೊಟೆಸ್ಟೆಂಟ್ರ ಪುಸ್ತಕಗಳು ಮತ್ತು ಬೈಬಲ್ಗಳನ್ನು ಸುಟ್ಟುಹಾಕಿದರು. ಅನೇಕ 12 ವರ್ಷದ ಮತ್ತು ಕಡಿಮೆ ವಯಸ್ಸಿನ ಮಕ್ಕಳನ್ನು ಬಂಧಿಸಿ ರೋಮನ್ ಕ್ಯಾಥೋಲಿಕ್ಕರನ್ನಾಗಿ ಬೆಳೆಸಲಾಯಿತು. ಭೂಮಿಯನ್ನು ಹೊಂದಿದ ಜನರಿಗೆ ಒಂದು ಮುಖ್ಯ ಅನುಕೂಲತೆಯೆಂದರೆ: ಮೂರು ತಿಂಗಳ ಅವರ ಬಹಿಷ್ಕಾರದ ಗಡುವು ಕೆಟ್ಟ ಚಳಿಗಾಲದಿಂದಾಗಿ ಮೂರು ತಿಂಗಳು ಮುಂದುವರೆಯಿತು.
ಗುತ್ತಿಗೆದಾರ ರೈತರು, ವರ್ತಕರು, ಕೆಲಸಗಾರರು ಮತ್ತು ಗಣಿಗಾರರಿಗೆ ಅವರಲ್ಲಿರುವ ವಸ್ತುವನ್ನು ಮಾರಲು ಮತ್ತು ಜಾಗ ತೊರೆಯಲು ಕೇವಲ ಎಂಟು ದಿನದ ಗಡುವನ್ನು ನೀಡಲಾಯಿತು. ಮೊದಲ ನಿರಾಶ್ರಿತರನ್ನು ಪ್ರೊಟೆಸ್ಟೆಂಟ್ ರಾಜರ ಆಳ್ವಿಕೆಯಿರುವ ಜರ್ಮನಿಯ ಅತ್ಯಂತ ಚಳಿಯಿರುವ ಮತ್ತು ಶೀತ ಮಾರುತಗಳಿರುವ ಉತ್ತರಭಾಗಕ್ಕೆ ಕಳುಹಿಸಲಾಯಿತು. ಅವರ ಮಕ್ಕಳು ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ನಡೆದರು ಅಥವಾ ಸವಾರಿ ಮಾಡಿದರು ಅಥವಾ ಬಂಡಿಗಳಲ್ಲಿ ಚಲಿಸಿದರು. ಅವರು ಪ್ರಯಾಣಿಸಿದಾಗ ಗಡೀಪಾರಾದವರ ಬಳಿ ಇದ್ದ ಉಳಿತಾಯದ ಮೊತ್ತವು ವ್ಯಯವಾಯಿತು. ಅವರು ಪ್ರಯಾಣಿಸುತ್ತಿರುವಾಗ ಕಳ್ಳರಿಂದ ರಕ್ಷಣೆ ನೀಡಲು ಸೈನಿಕರು ಕಂದಾಯ, ಸುಂಕ ಮತ್ತು ಹಣಕ್ಕಾಗಿ ದಾಳಿ ಮಾಡಿದರು.
ಅವರ ವಸಾಹತುಗಳು ಉತ್ತರಕ್ಕೆ ಚಲಿಸಿದಂತೆ ಅವರ ದುರವಸ್ಥೆಯು ಹೆಚ್ಚಾಯಿತು. ಗುರ್ಟೆಹ್ ಬರೆದ ಪದ್ಯ "ಹೆರ್ಮನ್ ಮತ್ತು ಡೊರೊಥೀಯ", ಸಾಲ್ಜ್ಬರ್ಗ್ ಬಹಿಷ್ಕಾರದಿಂದಾದ ಪ್ರಚೋದನೆಯಿಂದಾದ ಫ್ರೆಂಚ್ ಚಳುವಳಿಯ ನಂತರದಲ್ಲಾದ ಸ್ಪೋಟವನ್ನು ವಿವರಿಸಿತು. ಪ್ರೊಟೆಸ್ಟೆಂಟರು ಮತ್ತು ಕೆಲವು ಕ್ಯಾಥೊಲಿಕ್ಕರು ಚಳಿಗಾಲದಲ್ಲಿನ ಅವರ ಉಚ್ಛಾಟನೆಯ ಕ್ರೂರತೆಯಿಂದ ಹೆದರಿದರು ಮತ್ತು ಅವರು ತೋರಿದ ದೈರ್ಯವು ಅವರ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಪ್ರಾರಂಭದಲ್ಲಿ ನಿಧಾನವಾಗಿ ನಿರಾಶ್ರಿತರು ಅವರನ್ನು ಸ್ವಾಗತಿಸಿದ ಮತ್ತು ಸಹಾಯ ನೀಡುವ ನಗರಗಳಿಗೆ ತೆರಳಿದರು. ಆದರೆ ನಿರಾಶ್ರಿತರು ನೆಲೆಸಲು ಬೆಕಾದಷ್ಟು ದೊಡ್ಡ ಪ್ರಮಾಣದ ಸ್ಥಳವಿರಲಿಲ್ಲ.
ಕೊನೆಯದಾಗಿ 1732ರಲ್ಲಿ ರಾಜ ಪರ್ಶಿಯಾ ಫೆಡರಿಕ್ ವಿಲಿಯಂ I 12,000 ಸಲ್ಜ್ಬರ್ಗ್ನ ಪ್ರೊಟೆಸ್ಟೆಂಟ್ ನಿರಾಶ್ರಿತರನ್ನು ಸ್ವೀಕರಿಸಿದನು, ಅವರು ಇಪ್ಪತ್ತು ವರ್ಷಗಳ ಹಿಂದೆ ಪ್ಲೇಗ್ ಬಂದು ನಾಶವಾಗಿದ್ದ ಪೂರ್ವ ಪರ್ಶಿಯಾದಲ್ಲಿ ನೆಲೆಸಿದರು.[೩] ಇತರ ಚಿಕ್ಕ ಗುಂಪುಗಳು ಹಂಗೇರಿ ಸಾಮ್ರಾಜ್ಯದ ಈಗ ಸ್ಲೊವಾಕಿಯಾ ಮತ್ತು ಸೆರ್ಬಿಯಾಗಳೆಂದು ಕರೆಯುವ ಡೆಬ್ರೆತ್ಸೆನ್ ಮತ್ತು ಬನಟ್ ಪ್ರದೇಶಗಳಲ್ಲಿ ನೆಲೆಸಿದವು; ಹಂಗೇರಿ ಸಾಮ್ರಾಜ್ಯವು ಪ್ಲೇಗ್ನಿಂದ ಮತ್ತು ಒಟ್ಟೋಮನ್ ದಾಳಿಯಿಂದ ನಾಶವಾಗಿದ್ದ ಡಾನ್ಯೂಬ್ ನದಿಯಪ್ರದೇಶಗಳನ್ನು ಜನಭರಿತವನ್ನಾಗಿ ಮಾಡಲು ಜರ್ಮನ್ನರನ್ನು ನೇಮಿಸಿದರು. ಸೆಲ್ಜ್ಬರ್ಗರು ಜರ್ಮನಿಯ ಪ್ರೊಟೆಸ್ಟೆಂಟ್ ಪ್ರದೇಶಗಳಾದ ಬರ್ಲಿನ್ ಮತ್ತು ಹಾನೊವೆರ್; ಮತ್ತು ನೆದರ್ಲ್ಯಾಂಡ್ಗಳಿಗೆ ವಲಸೆ ಹೋದರು.
ಮಾರ್ಚ್ 12, 1734ರಂದು ಸಾಲ್ಜ್ಬರ್ಗ್ನ ಅರವತ್ತು ಜನ ಬಹಿಷ್ಕೃತರ ಚಿಕ್ಕ ತಂಡ ಮೊದಲು ಲಂಡನ್ನಿಗೆ ತೆರಳಿ ಉತ್ತರ ಅಮೇರಿಕಾದ ವಸಾಹತುವಾದ ಧಾರ್ಮಿಕ ಸ್ವಾತಂತ್ರ್ಯವನ್ನು ಬಯಸುತ್ತಿದ್ದ ಜಾರ್ಜಿಯಾದಲ್ಲಿ ನೆಲಸಿದರು. ನಂತರದ ವರ್ಷಗಳಲ್ಲಿ ಎರಡನೆ ಗುಂಪು ಚಲಿಸಿತು ಮತ್ತು 1741ರಲ್ಲಿ ಒಟ್ಟು ಸಮಾರು 150 ಸಾಲ್ಜ್ಬರ್ಗ್ ಬಹಿಷ್ಕೃತರು ಸವನ್ನಾಹ್ ನದಿಯ ಎಬನೀಜರ್ನಲ್ಲಿ ನೆಲೆಸಿದರು (ಜಾನ್ ಎ. ಟ್ರೆವುಲ್ಟೆನ್ನ್ನು ನೋಡಿ).
ಹಲವಾರು ಶತಮಾನಗಳಿಂದ ಪರ್ಷಿಯಾದ ಲಿತುಯೇನಿಯಾದಲ್ಲಿರುವ ಪ್ರೊಟೆಸ್ಟೆಂಟ್ ಸೆಲ್ಜ್ಬರ್ಗರು ತಮ್ಮ ಭಾಷೆಯ ಚರ್ಚುಗಳು ಮತ್ತು ಶಾಲೆಗಳನ್ನು ಹೊಂದಿದ್ದು ತಮ್ಮದೇ ಆದ ಜರ್ಮನ್ ಜನಾಂಗೀಯ ಗುರುತನ್ನು ಹೊಂದಿದ್ದಾರೆ. ಅವರ ಪೂರ್ವಜರನ್ನು ವಿಶ್ವ ಸಮರ IIರ ನಂತರ ಬಹಿಷ್ಕರಿಸಲಾಗಿತ್ತು.
ಜರ್ಮನ್ ಜನಾಂಗೀಯ ಬಹಿಷ್ಕೃತರು ಪಶ್ಚಿಮ ಯುರೋಪ್, ಸಂಯುಕ್ತ ಸಂಸ್ಥಾನ ಮತ್ತಿತರ ಪಾಶ್ಚಿಮಾತ್ಯ ದೇಶಗಳೆಡೆಗೆ ತೆರಳಿದರು. ಪಶ್ಚಿಮ ಜರ್ಮನಿಯಲ್ಲಿ ನೆಲೆಸಿರುವ ಜನರು ಸೆಲ್ಜ್ಬರ್ಗರೆನ್ನುವ ತಮ್ಮ ಐತಿಹಾಸಿಕ ಗುರುತನ್ನು ಉಳಿಸಿಕೊಳ್ಳಲು ಸಮುದಾಯದ ಸಂಸ್ಥೆಯನ್ನುಸ್ಥಾಪಿಸಿದರು.[೪]
1772-1803ರಲ್ಲಿ, ಪ್ರಧಾನ ಬಿಷಪ್ ಹೈರಾನಮಸ್ ಗ್ರಾಫ್ ವಾನ್ ಕೊಲೊರೆಡೊನಡಿಯಲ್ಲಿ ಸಾಲ್ಜ್ಬರ್ಗ್ ಗುಪ್ತ ಸಂಘಟನೆಗಳಿಗೆ ಕೇಂದ್ರವಾಯಿತು.
1803ರಲ್ಲಿ, ರಾಜ ನೆಪೋಲಿಯನ್ರು ಪ್ರಧಾನ ಬಿಷಪ್ ಸ್ಥಾನದಲ್ಲಿದ್ದವರನ್ನು ಕೆಳಗಿಸಿಸಿದರು ಮತ್ತು ಸಾಲ್ಜ್ಬರ್ಗ್ನ ಮತದಾರರ ಸಮುದಾಯದ ಮೂಲಕ ಟಸ್ಕನಿಯ ಮಾಜಿ ಗ್ರಾಂಡ್ ಡ್ಯೂಕ್ (ಪ್ರಾಂತಸೇನಾಯಕ)ರಾಗಿದ್ದ ಟಸ್ಕನಿಯ ಫರ್ಡಿನಂಡ್ IIIರಿಗೆ ಆ ಸ್ಥಾನ ನೀಡಲಾಯಿತು.
1805ರಲ್ಲಿ ಸಾಲ್ಜ್ಬರ್ಗ್ ಆಸ್ಟ್ರಿಯಾ ಸಾಮ್ರಾಜ್ಯಕ್ಕೆ ಬಕ್ರ್ಟಸ್ ಗಾಡನ್ನೊಂದಿಗೆ ಸೇರಿತು.
1809ಲ್ಲಿ ವಾಗ್ರಮ್ನಲ್ಲಿನ ಆಸ್ಟ್ರಿಯಾದ ಸೋಲಿನ ನಂತರ ಸಾಲ್ಜ್ಬರ್ಗ್ನ ಗಡಿಯು ಬವೇರಿಯಾ ಸಾಮ್ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.
ವಿಯೆನ್ನಾದ ಕಾಂಗ್ರೆಸ್ನಲ್ಲಿ 1815ರಲ್ಲಿ ಇದು ಅಂತಿಮವಾಗಿ ಆಸ್ಟ್ರಿಯಾಕ್ಕೆ ಹಿಂದಿರುಗಿತು, ಆದರೆ ರುಪೆರ್ಟಿಗೌ ಮತ್ತು ಬೆರ್ಕ್ಟಸ್ಗಾಡನ್ಗಳು ಬವೇರಿಯಾಕ್ಕೆ ವರ್ಗಾಯಿಸಲ್ಪಟ್ಟಿತು. ಸಾಲ್ಜ್ಬರ್ಗ್ ಸಾಲ್ಜಾಕ್ ಪ್ರಾಂತ್ಯವಾಗಿ ಒಗ್ಗೂಡಿತು ಮತ್ತು ಸಾಲ್ಜ್ಬರ್ಗರ್ಲ್ಯಾಂಡನ್ನು ಲಿಂಜ್ರು ಆಳುತ್ತಿದ್ದರು.[೫] 1850ರಲ್ಲಿ ಸಾಲ್ಜ್ಬರ್ಗ್ ಡಚ್ಚಿ ಆಫ್ ಸಾಲ್ಜ್ಬರ್ಗ್ನ ರಾಜಧಾನಿಯಾಯಿತು, ಇದು ಆಸ್ಟ್ರಿಯಾ ಸಾಮ್ರಾಜ್ಯದ ರಾಜನಿಗೊಳಪಟ್ಟ ಪ್ರದೇಶವಾಗಿದೆ. 1866ರಲ್ಲಿ ನಗರವು ಆಸ್ಟ್ರಿಯಾ-ಹಂಗೇರಿಯ ಭಾಗವಾಗಿ ಆಸ್ಟ್ರಿಯಾ ಸಾಮ್ರಾಜ್ಯದ ರಾಜನಿಗೊಳಪಟ್ಟ ಪ್ರದೇಶದ ರಾಜಧಾನಿಯಾಯಿತು.
ಆಸ್ಟ್ರಿಯಾ-ಹಂಗೇರಿ ಗಡಿಯ ರಾಜದಾನಿಯಾಗಿದ್ದ ಸಾಲ್ಜ್ಬರ್ಗ್ 1918ರಲ್ಲಿ ಸೋತಿತು.
ಆಸ್ಟ್ರಿಯಾ ಆಯ್ನ್ಚುಲೆಸ್ನ ಸಂದರ್ಭದಲ್ಲಿ ಸಾಲ್ಜ್ಬರ್ಗ್ ಅದರ ಭಾಗವಾಗಿತ್ತು, ಆಸ್ಟಿಯಾದ ಸ್ವಾತಂತ್ರ್ಯಕ್ಕಾಗಿ ಜನಮತಗಣನೆಯ ಒಂದು ದಿನದ ಮೊದಲು ಅಂದರೆ ಮಾರ್ಚ್12, 1938ರಲ್ಲಿ ಜರ್ಮನ್ ಸಾಮ್ರಾಜ್ಯದ ಮೂರನೇ ಭಾಗವಾಗಿ ಸೇರ್ಪಡಿಯಾಯಿತು. ಜರ್ಮನ್ ತಂಡಗಳು ನಗರಕ್ಕೆ ಚಲಿಸಿದವು. ರಾಜಕೀಯ ವಿರೋಧಿಗಳು, ಜ್ಯೂ ನಾಗರೀಕರು ಮತ್ತು ಇತರ ಅಲ್ಪಸಂಖ್ಯಾತರನ್ನು ಬಂಧಿಸಿ ಗಡಿಪಾರು ಮಾಡಿದರು. ಸಿನಗಾಗ್ಗಳನ್ನು ಹಳುಮಾಡಿದರು ಮತ್ತು ಆ ಸ್ಥಳದಲ್ಲಿ ಸೋವಿಯತ್ ಒಕ್ಕೂಟ ಮತ್ತಿತರ ದೇಶಗಳವರು ಬಂಧಿತರಿಗಾಗಿ ಅನೇಕ ಪಿಒಡಬ್ಲು ಶಿಬಿರಗಳನ್ನು ಸ್ಥಾಪಿಸಿದರು.
ವಿಶ್ವ ಸಮರ IIರ ಸಮಯದಲ್ಲಿ ಕೆಜಡ್ ಸಲ್ಜ್ಬರ್ಗ್-ಮ್ಯಾಕ್ಸಗ್ಲಾನ್ರ ಕಾನ್ಸಟ್ರೇಶನ್ ಶಿಬಿರಗಳನ್ನು ಇಲ್ಲಿ ಸ್ಥಾಪಿಸಲಾಯಿತು. ಇದು ಒಂದು ರೊಮ ಶಿಬಿರವಾಗಿದ್ದು ಕೂಲಿ ಕಾರ್ಮಿಕರನ್ನು ಸ್ಥಳೀಯ ಕೈಗಾರಿಕೆಗೆಳಿಗೆ ಒದಗಿಸುತ್ತಿದ್ದರು.
ಒಕ್ಕೂಟದವರು ಬಾಂಬ್ ದಾಳಿಯಿಂದ 7,600 ಮನೆಗಳನ್ನು ನಾಶಮಾಡಿದರು ಮತ್ತು 550 ನಿವಾಸಿಗಳನ್ನು ಕೊಲ್ಲಲಾಯಿತು. ನಗರದ ಸೇತುವೆಗಳು ಮತ್ತು ಕೆಥೆಡ್ರಲ್ನ ಸೌಧಗಳು ನಾಶವಾದರೂ ಹೆಚ್ಚಿನ ಬರೋಕ್ ವಾಸ್ತುಶಿಲ್ಪಗಳು ಹಾಗೆ ಉಳಿದವು. ಇದರ ಪರಿಣಾಮವಾಗಿ ನಗರವು ತನ್ನ ಶೈಲಿಯಲ್ಲಿರುವ ನಗರಗಳ ಉದಾಹರಣೆಗಳಲ್ಲೊಂದಾಯಿತು. ಅಮೇರಿಕಾದ ತಂಡಗಳು ಸಾಲ್ಜ್ಬರ್ಗ್ನ್ನು ಮೇ 5, 1945ರಂದು ಪ್ರವೇಶಿಸಿತು.
ವಿಶ್ವ ಸಮರ IIರ ನಂತರ ಸಾಲ್ಜ್ಬರ್ಗ್ ನಗರದಲ್ಲಿ ಅನೇಕ ಡಿಪಿ ಶಿಬಿರಗಳಿದ್ದವು. ಅವುಗಳೆಂದರೆ ರಿಯೆಡನ್ಬರ್ಗ್, ಹೆರ್ಜಲ್ ಶಿಬಿರ (ಫ್ರಾಂಜ್-ಜೊಸೆಫ್ಸ್-ಕಸೆರ್ನೆ), ಮುಲ್ನ್ ಶಿಬಿರ, ಬೆಟ್ ಬೈಲಿಕ್, ಬೆಟ್ ಟ್ರುಂಪೆಲ್ಡರ್, ಮತ್ತು ನ್ಯೂ ಪ್ಯಾಲೆಸ್ತೈನ್. ಸಾಲ್ಜ್ಬರ್ಗ್ ಆಸ್ಟ್ರಿಯಾದಲ್ಲಿರುವ ಅಮೇರಿಕಾ ಆಕ್ರಮಿತ ಪ್ರದೇಶದ ಕೇಂದ್ರವಾಗಿತ್ತು.
ವಿಶ್ವ ಸಮರ IIದ ನಂತರ ಸಾಲ್ಜ್ಬರ್ಗ್, ಸಾಲ್ಜ್ಬರ್ಗ್ ರಾಜ್ಯ(ಲ್ಯಾಂಡ್ ಸಾಲ್ಜ್ಬರ್ಗ್ ) ರಾಜಧಾನಿಯಾಯಿತು.
ಜನವರಿ 27, 2006ರಂದು ವೋಲ್ಫ್ಗ್ಯಾಂಗ್ ಮೊಜಾರ್ಟ್ನ 250ನೇ ಜನ್ಮ ದಿನದಂದು, ಎಲ್ಲಾ ಸಾಲ್ಜ್ಬರ್ಗ್ನ 35 ಚರ್ಚುಗಳ ಗಂಟೆಗಳು ರಾತ್ರಿ 8 ಗಂಟೆಯ ಸ್ವಲ್ಪ ನಂತರ (ಸ್ಥಳೀಯ ಸಮಯ) ಭಾರಿಸುವ ಮೂಲಕ ಆಚರಿಸುತ್ತಾರೆ. ಪ್ರಮುಖ ಆಚರಣೆಗಳನ್ನು ವರ್ಷಾದ್ಯಂತ ಆಚರಿಸಲಾಗುತ್ತದೆ.
ಸಾಲ್ಜ್ಬರ್ಗ್ 24 ನಗರದ ಜಿಲ್ಲೆಗಳು ಮತ್ತು 3 ನಗರಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಗಳನ್ನು ಹೊಂದಿದೆ.
ನಗರದ ಜಿಲ್ಲೆಗಳೆಂದರೆ (Stadtteile ):
ಜನಸಂಖ್ಯೆ ಅಧಿಕವಿರುವ ಪ್ರದೇಶಗಳು (Landschaftsräume )
ಸಾಲ್ಜ್ಬರ್ಗ್ ಪ್ರವಾಸಿಗರ ಮೆಚ್ಚಿನ ಸ್ಥಳ, ಕೆಲವು ಋತುಮಾನದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರಿಂದ ತುಂಬಿಕೊಂಡಿರುತ್ತದೆ. ಮೊಜಾರ್ಟ್ನ ಜನ್ಮಸ್ಥಳವಲ್ಲದೆ ಇನ್ನಿತರ ಪ್ರಸಿದ್ಧ ಸ್ಥಳಗಳೆಂದರೆ:
ಓಲ್ಡ್ ಟೌನ್
ಒಳ ಹಳೆಯ ನಗರದ ಹೊರಭಾಗ
ಪ್ರಧಾನ ಸಾಲ್ಜ್ಬರ್ಗ್ ಪ್ರದೇಶದೊಳಗೆ
ಸಾಲ್ಜ್ಬರ್ಗ್ ಪ್ರಾಣಿ ಸಂಗ್ರಹಾಲಯ
ವ್ಯಾಪಕವಾದ ರೈಲು ಸಂಪರ್ಕವು ನಗರಕ್ಕೆ ಸೇವೆ ಸಲ್ಲಿಸುತ್ತಿದ್ದು, ವಿಯೆನ್ನಾ, ಮ್ಯುನಿಚ್, ಇನ್ಸ್ಬ್ರುಕ್, ಮತ್ತು ಜ್ಯೂರಿಚ್ ನಗರಗಳ ಜೊತೆಗೆ ದಿನನಿತ್ಯವು ಪೂರ್ವ-ಪಶ್ಚಿಮ ರೈಲು ಸೇವೆ ಒದಗಿಸುತ್ತಿದೆ ಮತ್ತು ಪ್ರತಿನಿತ್ಯ ಅತಿವೇಗದ ಐಸಿಇ ಸೇವೆ ಒದಗಿಸುತ್ತಿದೆ. ನಗರವು ಆಲ್ಫ್ಸ್ ಮೂಲಕ ಇಟಲಿಗೆ ದಕ್ಷಿಣ ಭಾಗದ ರೈಲುಗಳ ಕೇಂದ್ರ ಸ್ಥಾನವಾಗಿ ಕೆಲಸ ನಿರ್ವಹಿಸುತ್ತಿದೆ.
ಸಾಲ್ಜ್ಬರ್ಗ್ ವಿಮಾನನಿಲ್ದಾಣವು ಯೂರೋಪಿನ ನಗರಗಳಾದ ಫ್ರ್ಯಾಂಕ್ಫರ್ಟ್, ವಿಯೆನ್ನಾ, ಲಂಡನ್, ರೊಟ್ಟ್ಡ್ಯಾಮ್, ಆಯ್ಮ್ಸ್ಟರ್ಡ್ಯಾಂ, ಬ್ರುಸೆಲ್ಸ್, ಡುಸೆಲ್ಡೋರ್ಫ್ ಮತ್ತು ಜ್ಯೂರಿಚ್,ಹ್ಯಾಮ್ಬರ್ಗ್ ಮತ್ತು ಡಬ್ಲಿನ್ಗಳಿಗೆ ವಿಮಾನ ಸೇವೆ ನೀಡುತ್ತಿದೆ. ಇದಲ್ಲದೆ ಹಲವಾರು ಬಾಡಿಗೆ ವಿಮಾನಗಳ ಸೇವೆಯನ್ನು ನೀಡುತ್ತದೆ.
ಮುಖ್ಯನಗರಗಳಲ್ಲಿ ಟ್ರಾಲಿಬಸ್ ಸೇವೆಯಿದ್ದು ಇಪ್ಪತ್ತು ಮಾರ್ಗಗಳಲ್ಲಿ ಸಂಚರಿಸುತ್ತವೆ, ಮತ್ತು ಹತ್ತು ನಿಮಿಷಕ್ಕೊಂದು ಬಸ್ ಸೇವೆ ಲಭ್ಯವಿದೆ. ಸಾಲ್ಜ್ಬರ್ಗ್ ನಾಲ್ಕು ಮಾರ್ಗಗಳ S-Bahn ವ್ಯವಸ್ಥೆ ಹೊಂದಿದ್ದು (S1, S2, S3, S11), ಮುಖ್ಯ ರೈಲು ನಿಲ್ದಾಣಗಳಿಂದ ಪ್ರತಿ 30 ನಿಮಿಷಕ್ಕೊಂದು ರೈಲು ಹೊರಡುತ್ತದೆ ಮತ್ತು ಈ ಬಗ್ಗೆ ಮಾಹಿತಿಯು ಒಬಿಬಿ ನೆಟ್ನಲ್ಲಿ ದೊರೆಯುತ್ತದೆ. ಹೊರ ಹೋಗುವ S1 ಮಾರ್ಗವು ಒಬರ್ನ್ಡೋರ್ಫ್ ನಲ್ಲಿರುವ ಜಗತ್ ಪ್ರಸಿದ್ಧ ಸೈಲೆಂಟ್ ನೈಟ್ ಚರ್ಚ್ಗೆ ಸುಮಾರು 25 ನಿಮಿಷದಲ್ಲಿ ತಲುಪುತ್ತದೆ.
1960ರಲ್ಲಿನ ದ ಸೌಂಡ್ ಆಫ್ ಮ್ಯೂಜಿಕ್ ಚಲನಚಿತ್ರವನ್ನು ಸಾಲ್ಜ್ಬರ್ಗ್ ಮತ್ತು ಸಾಲ್ಜ್ಬರ್ಗ್ ರಾಜ್ಯದಲ್ಲಿ ತಯಾರಿಸಲಾಯಿತು. ಮಾರಿಯಾ ವ್ಯಾನ್ ಟ್ರ್ಯಾಪ್ ಎಂಬ ಸಾಲ್ಜ್ಬರ್ಗ್ ಮೂಲದ ಕ್ರೈಸ್ತ ಸನ್ಯಾಸಿನಿಯ ನಿಜವಾದ ಕಥೆಯನ್ನಾಧರಿಸಿದೆ ಈಕೆಯು ಉನ್ನತಾಧಿಕಾರಿಗಳ ಕುಟುಂಬದ ಜೊತೆಗೆ ಜರ್ಮನಿಯ ಆಯ್ನ್ಚುಲೆಸ್ನಿಂದ ಪಲಾಯನ ಮಾಡಿದಳು. ಆಸ್ಟ್ರೀಯಾದಲ್ಲಿ ಈ ಚಿತ್ರವು ಪ್ರಸಿದ್ಧವಾಗಲಿಲ್ಲ, ಆದರೆ ಚಿತ್ರೀಕರಣ ನಡೆದ ಸ್ಥಳಕ್ಕೆ ಒಬ್ಬರೆ ಅಥವಾ ಪ್ರವಾಸದ ಮೂಲಕ ಸಂದರ್ಶಿಸಲು ಜನರು ಆಸೆ ಪಡುತ್ತಾರೆ.
ಆಸ್ಟ್ರೀಯಾದ ಅಪರಾಧ ಸರಣಿ ಸ್ಟಾಕಿಂಗರ್ ಸಾಲ್ಜ್ಬರ್ಗ್ ನಗರದಲ್ಲಿ ನಡೆಯುತ್ತದೆ.
2010ರ ನೈಟ್ & ಡೇ ಚಿತ್ರದ ಬಹುಭಾಗವನ್ನು ಸಾಲ್ಜ್ಬರ್ಗ್ನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರೀಕರಿಸಲಾಗಿದೆ.
ವ್ಯಾಪಕವಾಗಿ ಆಸ್ಟ್ರೇಲಿಯನ್ ಜರ್ಮನ್ ಭಾಷೆಯನ್ನು ಬರೆಯುತ್ತಾರೆ. ಈ ಪ್ರಾಂತ್ಯದ ಆಸ್ಟ್ರೋ-ಬವೆರಿಯನ್ ಜರ್ಮನಿಯ ಪ್ರಾಂತಭಾಷೆಯಾಗಿದ್ದು ಬಹು ಜನರು ಇದನ್ನೆ ಮಾತನಾಡುತ್ತಾರೆ.
ಪೂರ್ವದ ಎಸ್ವಿ ಆಸ್ಟ್ರೀಯಾ ಸಾಲ್ಜ್ಬರ್ಗ್ 1994ರಲ್ಲಿ ಯುಇಎಫ್ಎ ಕಪ್ ಫೈನಲ್ ಪಂದ್ಯಕ್ಕೆ ತಲುಪಿತ್ತು. ಏಪ್ರಿಲ್ 6, 2005ರಂದು ರೆಡ್ ಬುಲ್ ಈ ಕ್ಲಬ್ನ್ನು ತನ್ನ ವಶಕ್ಕೆ ತೆಗೆದುಕೊಂಡು ಎಫ್ಸಿ ರೆಡ್ ಬುಲ್ ಸಾಲ್ಜ್ಬರ್ಗ್ ಎಂದು ಮರು ನಾಮಕರಣ ಮಾಡಿತು. ಕ್ಲಬ್ನ ಮುಂದಿನ ಯೋಜನೆ ಎಂದರೆ ಯೂರೋಪಿನ 10 ಉತ್ತಮ ಫುಟ್ಬಾಲ್ ಕ್ಲಬ್ಗೆ ಸೇರ ಬೇಕೆಂಬುದು. ರೆಡ್ ಬುಲ್ ಸಾಲ್ಜ್ಬರ್ಗ್ನ ತವರು ಕ್ರೀಡಾಂಗಣ ವಾಲ್ಸ್ ಸೈಜನ್ಹೈಮ್ ಕ್ರೀಡಾಂಗಣ ಇದನ್ನು ಸಾಲ್ಜ್ಬರ್ಗ್ನ ಉಪನಗರದಲ್ಲಿದ್ದು 2008 ಯೂರೋಪಿಯನ್ ಫುಟ್ಬಾಲ್ ಚಾಂಪಿಯನ್ಶಿಪ್ ನಡೆದ ಸ್ಥಳ.
ಜನವರಿ 24, 2005,2014 ಚಳಿಗಾಲದ ಒಲಂಪಿಕ್ ನಡೆಸಲು ಆಸ್ಟ್ರೀಯನ್ ಒಲಂಪಿಕ್ ಕಮಿಟಿಯು ಸಾಲ್ಜ್ಬರ್ಗ್ನ್ನು ಆಯ್ಕೆ ಮಾಡಿದ್ದಾರೆ. ಇದರ ಜೊತೆಗೆ ಜೂನ್ 22, 2006ರಂದು ಐಒಸಿ, ಸೋಚಿ, ರಷಿಯಾ ಮತ್ತು ಪೆಯಂಗ್ಚಾಂಗ್, ಸೌತ್ ಕೋರಿಯಾದ ನಗರಗಳನ್ನು ಅಭ್ಯರ್ಥಿ ನಗರವನ್ನಾಗಿ ಆಯ್ಕೆ ಮಾಡಿದ್ದಾರೆ, ಆದರೆ ಜುಲೈ 4, 2007ರಂದು ಗ್ವಾಟೆಮಾಲಾದ ಗ್ವಾಟೆಮಾಲಾ ನಗರದಲ್ಲಿ ನಡೆದ ಮೊದಲನೇಯ ಸುತ್ತಿನ ಮತದಾನದಲ್ಲಿ ತೆಗೆದುಹಾಕಲಾಯಿತು. 2014ರ ಚಳಿಗಾಲದ ಒಲಂಪಿಕ್ ಆಟಗಳಿಗಾಗಿ ಸೋಚಿ ನಗರವನ್ನು ಆಥಿತೇಯ ವಹಿಸಲು ಆರಿಸಲಾಯಿತು.
|
He received a doctorate in law in 1884 and worked for a short while in courts in Vienna and Salzburg.
{{cite web}}
: Cite has empty unknown parameters: |month=
and |coauthors=
(help)