Tu banner alternativo

User:NAMMURA SHALE/sandbox

In today's world, User:NAMMURA SHALE/sandbox is an issue that has taken on great relevance in society. For several years now, User:NAMMURA SHALE/sandbox has become a point of interest for researchers, companies and governments, generating extensive debate about its implications and consequences. The importance of User:NAMMURA SHALE/sandbox has been reflected in various areas, from politics to technology, culture and economics. In this article, different approaches and perspectives on User:NAMMURA SHALE/sandbox will be discussed, with the aim of better understanding its impact today and in the future.

Tu banner alternativo
  • Comment: Rejecting to stop this pointless re-submission of not English article KylieTastic (talk) 15:45, 7 July 2025 (UTC)

ಮಳೆ ನೀರು ಕೊಯ್ಲು

ಮಳೆ ನೀರು ಕೊಯ್ಲು ಎಂಬುದು ಮಳೆ ನೀರನ್ನು ಒಟ್ಟುಗೂಡಿಸುವ ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿ ಇಟ್ಟುಕೊಳ್ಳುವ ವಿಧಾನವಾಗಿದೆ .ನೀರಿನ ವ್ಯವಸ್ಥೆ ಮಾಡಲು ಅಥವಾ ಅಂತರ್ಜಲ ಪುನರ್ಬಟಿ ಕಾರ್ಯ ಎಂದು ಕರೆಯಲಾಗುವ ಈ ಪ್ರಕ್ರಿಯೆಯಲ್ಲಿ ಇಂಗು ಗುಂಡಿಗಳನ್ನು ತುಂಬಿಸಲು ಮಳೆ ನೀರು ಕೊಯ್ಲು ಪದ್ಧತಿಯನ್ನು ಬಳಸಿಕೊಂಡು ಬರಲಾಗಿದೆ . ಸರ್ಕಾರಿ ಪ್ರೌಢಶಾಲೆ ಕೋನಪ್ಪನ ಅಗ್ರಹಾರ ಬೆಂಗಳೂರು ದಕ್ಷಿಣ ವಲಯ ಮೂರರಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಮತ್ತು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ . ಎಂದು ತಿಳಿಸಲು ಹರ್ಷವೆನಿಸುತ್ತದೆ .

ಮಳೆ ನೀರು ಕೊಯ್ಲು

ನಮ್ಮ ಶಾಲೆಯ ಕಾಂಪೌಂಡ್ ಆವರಣದಲ್ಲಿ 28 ಇಂಗು ಗುಂಡಿಗಳನ್ನು ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ವತಿಯಿಂದ ನಿರ್ಮಿಸಲಾಗಿದ್ದು ತಾರಸಿಯಿಂದ ಬೀಳುವ ಮಳೆ ನೀರನ್ನು ಪೈ ಪುಗಳ ಮುಖಾಂತರ ಇಂಗು ಗುಂಡಿಗೆ ಸಂಪರ್ಕ ಕಲ್ಪಿಸಲಾಗಿದೆ . ನಮ್ಮ ಶಾಲೆಯಲ್ಲಿ ಮೇಲ್ಮೈ ಹರಿವಿನ ನೀರಿನ ನಷ್ಟವನ್ನು ಮಾಡದೆ ಸರಿಯಾದ ವ್ಯವಸ್ಥೆ ಮಾಡಿ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ನಾವು ನೀರಿನ ಕೊರತೆ ಎದುರಿಸುತ್ತಿರುವ ಕಾರಣ ಮಳೆ ನೀರು ಕೊಯ್ಲು ಮುಖ್ಯವಾಗಿದೆ . ಮಳೆ ನೀರನ್ನು ಉಳಿಸಲು ಮತ್ತು ಮಳೆ ನೀರನ್ನು ವ್ಯರ್ಥವಾಗದಂತೆ ತಡೆಯಲು ಒಂದು ಉತ್ತಮ ಆರ್ಥಿಕ ಮಾರ್ಗವಾಗಿದೆ. ಹರಿದು ನಷ್ಟವಾಗುವ ಮಳೆ ನೀರನ್ನು ಇಂಗುಗುಂಡಿಗಳ ಮೂಲಕ ಭೂಮಿಯಡಿ ಇಳಿಯುವಂತೆ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸಿ ಜನಜಾಗೃತಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ನಮ್ಮ ಶಾಲೆಯಲ್ಲಿ ನಡೆಯುತ್ತಿದೆ ಇದರಿಂದ ಬಿರುಸಿನ ಮಳೆಯಲ್ಲೂ "ಮಣ್ಣಿನ ಸವೆತ" ತಪ್ಪಿಸುವಲ್ಲಿ ಅತ್ಯಂತ ಪೂರಕ ವಿಧಾನವಾಗಿದೆ ಮುಗಿದುಹೋಗುವ ಸಂಪನ್ಮೂಲಗಳಲ್ಲೊಂದಾದ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ಇಂಗಿಸುವುದರ ಜೊತೆಗೆ ಪರಿಸರ ಸಂರಕ್ಷಿಸುವ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಶಾಲೆಯಲ್ಲಿ ಇಂಗುಗುಂಡಿ ಗಳನ್ನು ನಿರ್ಮಿಸಲಾಗಿದೆ .

ಮಳೆ ನೀರು ಕೊಯ್ಲು

ನೀರು ಜೀವನಕ್ಕೆ ಅತ್ಯಂತ ಅನಿವಾರ್ಯ ವಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಜಾಗತಿಕ ಜನಸಂಖ್ಯೆ ಯಹೆಚ್ಚಳ ಮತ್ತು ಮಾನವನ ಅಗತ್ಯಗಳಿಗಾಗಿ ನೀರಿನ ಬಳಕೆಯುನೀರಿನ ಬಳಕೆಯು ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ನೀರನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ . ನಮ್ಮ ಭವಿಷ್ಯದ ಬಳಕೆಗಾಗಿ ಮಳೆ ನೀರನ್ನು ಸಂರಕ್ಷಿಸುವ ಜವಾಬ್ದಾರಿ ಯಾಗಿರುವುದರಿಂದ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ . ಇತ್ತೀಚಿನ ವರ್ಷಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಇಂಗುಗುಂಡಿಗಳ ನಿರ್ಮಾಣವು ಅತ್ಯಂತ ಪ್ರಮುಖವಾಗಿದ್ದು, ಅದನ್ನು ನಮ್ಮ ಶಾಲೆಯು ನಿರ್ಮಾಣ ಮಾಡಿ ವಿದ್ಯಾರ್ಥಿಗಳಲ್ಲಿ ಪೋಷಕರಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಹರಿವು ಮೂಡಿಸುವ ಕಾರ್ಯವನ್ನು ನಮ್ಮ ಶಾಲೆಯಲ್ಲಿ ಮಾಡುತ್ತಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ.

ಸಿ ಪದ್ಮಾವತಿ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕೋನಪ್ಪನ ಅಗ್ರಹಾರ ಬೆಂಗಳೂರು ದಕ್ಷಿಣ ವಲಯ -03