ಸಂಸ್ಥೆಯ ಪ್ರಕಾರ | Public (NASDAQ: ADBE) |
---|---|
ಸ್ಥಾಪನೆ | Mountain View, California (1982) |
ಸಂಸ್ಥಾಪಕ(ರು) | Charles Geschke John Warnock |
ಮುಖ್ಯ ಕಾರ್ಯಾಲಯ | San Jose, California, U.S. |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Charles Geschke, Founder John Warnock, Founder Shantanu Narayen, President & CEO |
ಉದ್ಯಮ | Computer software[೧] |
ಉತ್ಪನ್ನ | See List of Adobe products |
ಆದಾಯ | $ 3.579 billion (2008)[೨] |
ಆದಾಯ(ಕರ/ತೆರಿಗೆಗೆ ಮುನ್ನ) | $ 1.028 billion (2008)[೨] |
ನಿವ್ವಳ ಆದಾಯ | $ 871.8 million (2008)[೨] |
ಒಟ್ಟು ಆಸ್ತಿ | $ 5.821 billion (2008)[೨] |
ಒಟ್ಟು ಪಾಲು ಬಂಡವಾಳ | $ 4.410 billion (2008)[೨] |
ಉದ್ಯೋಗಿಗಳು | 8,660 (December 2009)[೩] |
ಜಾಲತಾಣ | Adobe.com |
ಅಡೋಬ್ ಸಿಸ್ಟಮ್ಸ್ ಇನ್ಕಾರ್ಪೊರೇಟೆಡ್ (pronounced /əˈdoʊbiː/ ə-DOE-bee) (NASDAQ: ADBE) ಒಂದು ಅಮೆರಿಕನ್ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿ, ಇದರ ಪ್ರಧಾನ ಕಛೇರಿ USA ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿದೆ. ಈ ಕಂಪನಿಯು ಮೊದಲಿನಿಂದಲೂ ತಯಾರಿಸುತ್ತಿರುವ ಮಲ್ಟಿಮೇಡಿಯಾ ಮತ್ತು ಕ್ರಿಯಾತ್ಮಕ ಸಾಫ್ಟ್ವೇರ್ ಉತ್ಪನ್ನಗಳ ಜೊತೆಯಲ್ಲಿ ಇತ್ತೀಚೆಗೆ ರಿಚ್ ಇಂಟರ್ನೆಟ್ ಅಪ್ಲಿಕೇಷನ್ ಸಾಫ್ಟ್ವೇರ್ ಡೆವಲಂಪ್ಮೆಂಟ್ನೆಡೆಗೆ ಲಗ್ಗೆ ಇಟ್ಟಿದೆ. ಡಿಸೆಂಬರ್ 1982[೩] ರಲ್ಲಿ ಜಾನ್ ವರ್ನೋಕ್ ಮತ್ತು ಚಾರ್ಲ್ಸ್ ಗೆಸ್ಚ್ಕೆ ಯವರು ಅಡೋಬ್ ಅನ್ನು ಸ್ಥಾಪಿಸಿದರು, ಜೆರಾಕ್ಸ್ PARC ಕಂಪನಿಯನ್ನು ಬಿಟ್ಟು ಇವರು ಪೋಸ್ಟ್ಸ್ಕ್ರಿಪ್ಟ್ನ ಪುಟ ವಿವರಣೆ ಭಾಷೆಯ ಅಭಿವೃದ್ಧಿ ಹಾಗೂ ಮಾರಾಟಮಾಡಲು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದರು. 1985ರಲ್ಲಿ, ಆಪಲ್ ಕಂಪ್ಯೂಟರ್ ಅದರ ಲೇಸರ್ ರೈಟರ್ ಪ್ರಿಂಟರ್ಗಳಲ್ಲಿ ಪೋಸ್ಟ್ಸ್ಕ್ರಿಪ್ಟ್ ಬಳಸಲು ಪರವಾನಗಿ ನೀಡಿತು, ಇದು ಡೆಸ್ಕ್ಟಾಪ್ ಪಬ್ಲಿಷಿಂಗ್ ಕ್ರಾಂತಿಗೆ ಹೊಳಪು ತಂದಿತು. ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯಾದ ಅಡೋಬ್ ಕ್ರೀಕ್ನಿಂದ ಈ ಕಂಪನಿಗೆ ಅಡೋಬ್ ಹೆಸರು ಬಂದಿದೆ, ಇದು ಕಂಪನಿಯ ಸ್ಥಾಪಕರಲ್ಲೊಬ್ಬರ ಮನೆಯ ಹಿಂದೆ ನಡೆಯುತ್ತಿತ್ತು.[೩] ಅಡೋಬ್ ತನ್ನ ಹಿಂದಿನ ಪ್ರತಿಸ್ಪರ್ಧಿ ಮ್ಯಾಕ್ರೊಮೀಡಿಯಾವನ್ನು ಡಿಸೆಂಬರ್ 2005ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು, ಇದರಿಂದಾಗಿ ಹೊಸ ಉತ್ಪನ್ನಗಳು ಮತ್ತು ಪ್ಲಾಟ್ಫಾರ್ಮ್ಗಳು ಅದರ ಉತ್ಪನ್ನಗಳ ಖಾತೆಗೆ ಸೇರಿಕೊಂಡವು ಅವೆಂದರೆ ಅಡೋಬ್ ಕೋಲ್ಡ್ಫ್ಯೂಶನ್, ಅಡೋಬ್ ಡ್ರೀಮ್ವೇವರ್, ಅಡೋಬ್ ಫ್ಲಾಷ್ ಮತ್ತು ಅಡೋಬ್ ಫ್ಲೆಕ್ಸ್. ಆಗಸ್ಟ್ 2009ರಂತೆ, ಅಡೋಬ್ ಸಿಸ್ಟಮ್ಸ್ 7,564 ಉದ್ಯೋಗಿಗಳನ್ನು ಹೊಂದಿದೆ,[೩] ಅದರಲ್ಲಿ ಸುಮಾರು 40%ರಷ್ಟು ಜನರು ಸ್ಯಾನ್ ಜೋಸ್ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಒರ್ಲ್ಯಾಂಡೊ, FL; ಸೀಟಲ್, WA; ಸ್ಯಾನ್ ಫ್ರಾನ್ಸಿಸ್ಕೊ, CA; ಒಟ್ಟಾವ, ಒಂಟಾರಿಯೊ; ಮಿನ್ನೆಯಪೋಲಿಸ್, MN; ನ್ಯೂಟೌನ್, MA; ಸ್ಯಾನ್ ಲೂಯಿಸ್ ಒಬಿಸ್ಪೊ, CA; ಹ್ಯಾಂಬರ್ಗ್, ಜರ್ಮನಿ; ನೋಯ್ಡಾ, ಭಾರತ; ಬೆಂಗಳೂರು, ಭಾರತ; ಬುಚಾರೆಸ್ಟ್, ರೊಮೇನಿಯಾ; ಬೀಜಿಂಗ್, ಚೈನಾ ನಗರಗಳಲ್ಲಿ ಅಡೋಬ್ ತನ್ನ ಪ್ರಧಾನ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಹೊಂದಿದೆ.
ಪೋಸ್ಟ್ಸ್ಕ್ರಿಪ್ಟ್ನ ನಂತರ ಅಡೋಬ್ನ ಮೊದಲ ಉತ್ಪನ್ನ ಡಿಜಿಟಲ್ ಫಾಂಟ್ಸ್, ಅವರು ಅದನ್ನು ಟೈಪ್ 1ಎಂದು ಕರೆಯಲ್ಪಡುವ ಒಡೆತನದ ಶೈಲಿಯಲ್ಲಿ ಬಿಡುಗಡೆ ಮಾಡಿದರು. ಆಪಲ್ ನಂತರದಲ್ಲಿ ಸ್ಫರ್ಧಿಯಾಗಿ ಟ್ರೂಟೈಪ್ ಅನ್ನು ಅಭಿವೃದ್ಧಿಗೊಳಿಸಿತು, ಅದು ಸಂಪೂರ್ಣ ಆರೋಹ್ಯತೆ ಮತ್ತು ಫಾಂಟ್ಗಳ ಔಟ್ಲೈನ್ನಿಂದ ಸೃಷ್ಟಿಯಾದ ಪಿಕ್ಸೆಲ್ ಮಾದರಿಯ ನಿಖರವಾದ ನಿಯಂತ್ರಣವನ್ನು ಹೊಂದಿತ್ತು, ಹಾಗೂ ಅದರ ಪರವಾನಗಿಯನ್ನು ಮೈಕ್ರೋಸಾಫ್ಟ್ಗೆ ನೀಡಿತು. ಇದಕ್ಕೆ ಪತ್ಯುತ್ತರವಾಗಿ ಅಡೋಬ್ ಟೈಪ್ 1 ಅನ್ನು ನಿರ್ದಿಷ್ಟವಿವರಣೆಯೊಂದಿಗೆ ಘೋಷಿಸಿತು ಹಾಗೂ ಅಡೋಬ್ ಟೈಪ್ ಮ್ಯಾನೇಜರ್ ಅನ್ನು ಬಿಡುಗಡೆ ಮಾಡಿತು, ಟೈಪ್ 1 ಫಾಂಟ್ಗಳನ್ನು ಪರದೆಯ ಮೇಲೆ ಹೊಂದಿರುವ WYSIWYGನ್ನು ಒಪ್ಪುವ ಸಾಫ್ಟ್ವೇರ್ನಂತಹ ಟ್ರೂಟೈಪ್ , ಆದಾಗ್ಯೂ ಇದು ನಿಖರವಾದ ಪಿಕ್ಸೆಲ್-ಲೆವೆಲ್ ನಿಯಂತ್ರಣವನ್ನು ಹೊಂದಿಲ್ಲ. ಆದರೆ ಟ್ರೂಟೈಪ್ನ ಬೆಳವಣಿಗೆಯನ್ನು ತಡೆಯಲ್ಲು ಮಾಡಿದ ಪ್ರಯತ್ನಗಳು ಬಹಳ ತಡವಾಯಿತು. ಆದಾಗ್ಯೂ ಟೈಪ್ 1 ಗ್ರಾಫಿಕ್ಸ್/ಪಬ್ಲಿಷಿಂಗ್ ಮಾರುಕಟ್ಟೆಯಲ್ಲಿ ಉತ್ತಮ ಮಟ್ಟದ ಸ್ಥಾನಗಳಿಸಿತು, ಟ್ರೂಟೈಪ್ ವ್ಯಾಪಾರದಲ್ಲಿ ಮತ್ತು ವಿಂಡೋಸ್ ಬಳಸುವ ಸಾಮಾನ್ಯ ಬಳಕೆದಾರನಿಗೆ ಉಪಯೋಗವಾಯಿತು. 1996ರಲ್ಲಿ, ಅಡೋಬ್ ಮತ್ತು ಮೈಕ್ರೋಸಾಫ್ಟ್ ಓಪನ್ಟೈಪ್ ಫಾಂಟ್ ಶೈಲಿಯನ್ನು ಘೋಷಿಸಿದವು, ಹಾಗೂ 2003ರಲ್ಲಿ ಅಡೋಬ್ ತನ್ನ ಟೈಪ್ 1 ಫಾಂಟ್ ಲೈಬ್ರರಿಯನ್ನು ಓಪನ್ಟೈಪ್ ಆಗಿ ಪರಿವರ್ತಿಸುವುದು ಸಂಪೂರ್ಣವಾಯಿತು. 1980ರ ಮಧ್ಯದಲ್ಲಿ, ಅಡೋಬ್ ಗ್ರಾಹಕರ ಸಾಫ್ಟ್ವೇರ್ ಮಾರುಕಟ್ಟೆಯನ್ನು ಅಡೋಬ್ ಇಲ್ಲಸ್ಟ್ರೇಟರ್ ನೀಡುವುದರ ಮೂಲಕ ಪ್ರವೇಶಿಸಿತು, ಇದು ಒಂದು ವೆಕ್ಟರ್-ಆಧಾರಿತ ಆಪಲ್ ಮ್ಯಾಕಿಂತೋಶ್ಗಾಗಿ ಡ್ರಾಯಿಂಗ್ ಪ್ರೋಗ್ರಾಮ್ ಆಗಿದೆ. ಇಲ್ಲಸ್ಟ್ರೇಟರ್ ಇನ್-ಹೌಸ್ ಫಾಂಟ್ ಅಭಿವೃದ್ಧಿ ಸಾಫ್ಟ್ವೇರ್ನಿಂದ ಅಭಿವೃದ್ಧಿ ಹೊಂದಿ ಲೇಸರ್ ಪ್ರಿಂಟರ್ಗಳ ಪೋಸ್ಟ್ಸ್ಕ್ರಿಪ್ಟ್-ಎನೇಬಲ್ಡ್ ಅನ್ನು ಜನಪ್ರಿಯಗೊಳಿಸಲು ಸಹಕಾರಿಯಾಯಿತು. ಮ್ಯಾಕ್ಡ್ರಾನಂತಲ್ಲದೆ, ನಂತರದಲ್ಲಿ ಬಂದ ನಿರ್ಧಿಷ್ಟ ಮ್ಯಾಕಿಂತೋಶ್ ವೆಕ್ಟರ್ ಡ್ರಾಯಿಂಗ್ ಪ್ರೋಗ್ರಾಮ್, ಇಲ್ಲಸ್ಟ್ರೇಟರ್ ಸುಲಭವಾಗಿ ಆಕಾರಪಡೆಯಬಲ್ಲ ಬೆಝಿಯೆರ್ ಕರ್ವ್ಗಳಿಂದ ಅಭೂತಪೂರ್ವ ನಿಖರತೆಯನ್ನು ಹೊಂದಿದ ವಿವಿಧ ಆಕಾರಗಳನ್ನು ರಚಿಸುವ ಸಾಮರ್ಥವನ್ನು ಹೊಂದಿದೆ. ಇಲ್ಲಸ್ಟ್ರೇಟರ್ನ ಫಾಂಟ್ ರೂಪಿಸುವುದು, ಹೇಗಾದರೂ, ಅದನ್ನು ಮ್ಯಾಕಿಂತೋಷ್ನ ಕ್ವಿಕ್ಡ್ರಾ ಲೈಬ್ರರಿಗೆ ಒಪ್ಪಿಸಲಾಯಿತು ಹಾಗೂ ಅದು ಅಡೋಬ್ ಕಂಪನಿಯು ಅಡೋಬ್ ಟೈಪ್ ಮ್ಯಾನೇಜರ್ ಅನ್ನು ಬಿಡುಗಡೆ ಮಾಡುವತನಕ ಪೋಸ್ಟ್ಸ್ಕ್ರಿಪ್ಟ್ನ ಬದಲಾವಣೆ ಆಗಿರಲಿಲ್ಲ. 1989ರಲ್ಲಿ, ಮಾಕಿಂತೋಶ್ಗಾಗಿ ಒಂದು ಗ್ರಾಫಿಕ್ ಎಡಿಟಿಂಗ್ ಪ್ರೋಗ್ರಾಮ್ ಆದ ಫೋಟೋಶಾಪ್ ಅನ್ನು ಸೃಷ್ಟಿಸಿತು, ಅದು ಅಡೋಬ್ನ ಉತ್ಪನ್ನಗಳಲ್ಲಿ ಅತೀ ಪ್ರಮುಖವೆನಿಸಿತು. ಸ್ಥಿರವಾದ ಮತ್ತು ಪೂರ್ಣ-ವೈಶಿಷ್ಟ್ಯಗಳನ್ನುಳ್ಳ, ಫೋಟೋಶಾಪ್ 1.0 ಅನ್ನು ಅಡೋಬ್ ಮಾರುಕಟ್ಟೆಗೆ ಪರಿಚಯಿಸಿತು ಹಾಗೂ ಅದು ಬಹಳ ಬೇಗ ಮಾರುಕಟ್ಟೆಯಲ್ಲಿ ಪ್ರಭಾವ ಬೀರಿತು.[೪] ಬಹುಶಃ, ಮ್ಯಾಕಿಂತೋಶ್ ಪ್ಲಾಟ್ಫಾರ್ಮ್ನಲ್ಲಿ ಅಡೋಬ್ ಇಟ್ಟ ಕೆಲವು ತಪ್ಪು ಹೆಜ್ಜೆಗಳು ಮಾರುಕಟ್ಟೆಯಲ್ಲಿ ಡೆಸ್ಕ್ಟಾಪ್ ಪಬ್ಲಿಶಿಂಗ್ (DTP) ಪ್ರೋಗ್ರಾಮ್ನ ಬೆಳವಣಿಗೆಯಾಗದಿರುವುದಕ್ಕೆ ಕಾರಣವಾಯಿತು. 1985ರ ಪೇಜ್ಮೇಕರ್ ಜೊತೆಯ ಆಲ್ಡಸ್ಗಿಂತಲೂ 1987ರ ಕ್ವಾರ್ಕ್ಪ್ರೆಸ್ ಜೊತೆಯ ಕ್ವಾರ್ಕ್ DTP ಮಾರುಕಟ್ಟೆಯಲ್ಲಿ ಬೇಗ ಹೆಸರು ಮಾಡಿತು. ಹೊರಬರುತ್ತಿರುವ ವಿಂಡೋಸ್ DTP ಮಾರುಕಟ್ಟೆಗೆ ಉತ್ತರಿಸುವಲ್ಲಿ ಅಡೋಬ್ ನಿಧಾನವಾಗಿತ್ತು. ಆದಾಗ್ಯೂ, ಮಾರುಕಟ್ಟೆಗೆ ಇನ್ಡಿಸೈನ್ ಹಾಗೂ ಅದರ ಕ್ರಿಯೇಟಿವ್ ಸೂಟ್ ಕೊಡುಗೆಗಳ ಕಂತೆಯೊಂದಿಗೆ ಬಿಡುಗಡೆ ಮಾಡುವ ಮೂಲಕ ಅಡೋಬ್ ಮಹತ್ವದ ದಾಪುಗಾಲು ಹಾಕಿತು. ಲೆಕ್ಕಾಚಾರದ ಗುರಿಯನ್ನು ಹೇಳುವಲ್ಲಿ ವಿಫಲವಾದುದರಿಂದ, ಅಡೋಬ್ ಇಲ್ಲಸ್ಟ್ರೇಟರ್ನ ಸಂಪೂರ್ಣ ಆವೃತ್ತಿಯನ್ನು ಸ್ಟೀವ್ ಜಾಬ್ಸ್' ಇಲ್-ಫೇಟೆಡ್ NeXT ಸಿಸ್ಟಂಗಾಗಿ ಬಿಡುಗಡೆ ಮಾಡಿತು, ಆದರೆ ಇದು ವಿಂಡೋಸ್ ಆವೃತ್ತಿಗೆ ಕಳಪೆ ನಿರ್ಮಾಣವಾಗಿತ್ತು. ಈ ಎಲ್ಲಾ ತಪ್ಪು ಹೆಜ್ಜೆಗಳನ್ನಿಟ್ಟಾಗ್ಯೂ, ಪೋಸ್ಟ್ಸ್ಕ್ರಿಪ್ಟ್ ಇಂಟರ್ಪ್ರಿಟರ್ನ ಪರವಾನಗಿಯ ಶುಲ್ಕದಿಂದಾಗಿ ಅಡೋಬ್ ಹೆಚ್ಚು ಕಾಲ ನಿಲ್ಲುವಂತೆ ಮಾಡಿತು ಅಥವಾ ಅದರ 1980ರ ಕೊನೆಯಲ್ಲಿ ಹಾಗೂ 1990ರ ಪ್ರಾರಂಭದಲ್ಲಿ ಪ್ರತಿಸ್ಪರ್ಧಿ ಕಂಪನಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಯಿತು. ಡಿಸೆಂಬರ್ 1991ರಲ್ಲಿ, ಅಡೋಬ್ ಕಂಪನಿಯು ಅಡೋಬ್ ಪ್ರೀಮಿಯರ್ ಅನ್ನು ಬಿಡುಗಡೆ ಮಾಡಿತು, ಅದು 2003ರಲ್ಲಿ ಅಡೋಬ್ ಪ್ರೀಮಿಯರ್ ಪ್ರೊ ಎಂದು ಹೊಸ ಹೆಸರು ಪಡೆಯಿತು. 1994ರಲ್ಲಿ, ಅಡೋಬ್ ಆಲ್ಡಸ್ ಕಂಪನಿಯನ್ನು ತನ್ನದಾಗಿಸಿಕೊಂಡಿತು ಮತ್ತು ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಪೇಜ್ ಮೇಕರ್ ಹಾಗೂ ಅಡೋಬ್ ಆಫ್ಟರ್ ಎಫೆಕ್ಟ್ಸ್ಗಳನ್ನು ಸೇರಿಸಿತು; ಇದು TIFF ಫೈಲ್ ಶೈಲಿಯನ್ನು ಕೂಡಾ ನಿಯಂತ್ರಿಸುತ್ತದೆ. 1995ರಲ್ಲಿ, ಅಡೋಬ್ ಕಂಪನಿಯು ಫ್ರೇಮ್ ಟೆಕ್ನಾಲಜಿ ಕಾರ್ಪೊರೇಶನ್ ಅನ್ನು 1999ರಲ್ಲಿ ತನ್ನದಾಗಿಸಿಕೊಂಡ ನಂತರ ತನ್ನ ಉತ್ಪನ್ನಗಳ ಸಾಲಿಗೆ ಅಡೋಬ್ ಫ್ರೇಮ್ಮೇಕರ್ ಅನ್ನು ಸೇರಿಸಿತು, ಇದು ಒಂದು ಉದ್ದನೆಯ-ಡಾಕ್ಯುಮೆಂಟ್ DTP ಅಪ್ಲಿಕೇಶನ್, ಅಡೋಬ್ ತನ್ನ ನೇರ ಪ್ರತಿಸ್ಪರ್ಧಿ ಕ್ವಾರ್ಕ್ಕಾಪಿಡೆಸ್ಕ್ ವಿರುದ್ಧವಾಗಿ ಅಡೋಬ್ ಇನ್ಕಾಪಿಯನ್ನು ಪರಿಚಯಿಸಿತು.[೫]
ಹೂವರ್ಸ್[೬] ಪ್ರಕಾರ ಅಡೋಬ್ನ ಮೊದಲ ಪ್ರತಿಸ್ಪರ್ಧಿಗಳೆಂದರೆ:
ನಿರ್ವಾಹಕ ಸಮಿತಿ [೧೮] | |
ಚಾರ್ಲ್ಸ್ ಎಮ್. ಜೆಸ್ಚ್ಕೆ | ಸಮಿತಿಯ ಸಹ-ಅಧ್ಯಕ್ಷ |
ಜಾನ್ ಇ.ವಾರ್ನಾಕ್ | ಸಮಿತಿಯ ಸಹ-ಅಧ್ಯಕ್ಷ |
ಶಂತನು ನಾರಾಯಣ್ | ಅಧ್ಯಕ್ಷ & ಮುಖ್ಯ ನಿರ್ವಹಣಾ ಅಧಿಕಾರಿ |
ಕರೇನ್ ಕೋಟ್ಲೆ | ಹಿರಿಯ ಉಪಾಧ್ಯಕ್ಷ, ಜನರಲ್ ಕೌನ್ಸಿಲ್, ಮತ್ತು ಕಾರ್ಪೊರೇಟ್ ಕಾರ್ಯದರ್ಶಿ |
ಮಾರ್ಕ್ ಗರ್ರೆಟ್ | ಇಕ್ಸಿಕ್ಯುಟಿವ್ ಉಪಾಧ್ಯಕ್ಷ ಮತ್ತು ಮುಖ್ಯ ಹಣಕಾಸು ಅಧಿಕಾರಿ |
ಡೊನ್ನಾ ಮೊರ್ರಿಸ್ | ಜಿರಿಯ ಉಪಾಧ್ಯಕ್ಷ, ಹ್ಯೂಮನ್ ರಿಸೋರ್ಸಸ್ |
ಕೆವಿನ್ ಲಿಂಚ್ | ಹಿರಿಯ ಉಪಾಧ್ಯಕ್ಷ: ಅನುಭವಿ & ತಂತ್ರಜ್ಞಾನ ಗುಂಪು, ಮುಖ್ಯ ತಂತ್ರಜ್ಞಾನ ಅಧಿಕಾರಿ |
ಅಡೋಬ್ನ ಉತ್ಪನ್ನಗಳು ಕೆಳಕಂಡಂತಿವೆ:
1986ರಲ್ಲಿ ಅಡೋಬ್ ಸಿಸ್ಟಮ್ಸ್ NASDAQ ಪ್ರವೇಶಿಸಿತು. ಅಡೋಬ್ನ 2006ರ ಆದಾಯಗಳು $2.575 ಬಿಲಿಯನ್ USD ರಷ್ಟಿತ್ತು.[೧೯] ಫೆಬ್ರವರಿ 2007ರಂತೆ,ಅಡೋಬ್ನ ಮಾರುಕಟ್ಟೆಯ ಹೂಡಿಕೆ ಅಂದಾಜು $23 ಬಿಲಿಯನ್ USDಗಳಷ್ಟಿತ್ತು; ಆಗಸ್ಟ್ 2007ರಲ್ಲಿ, ಸುಮಾರು 49 P/E ಪ್ರಮಾಣದ ಮತ್ತು ಸುಮಾರು $0.82ರಷ್ಟು EPS ಜೊತೆಯಲ್ಲಿ ಅದರ ಶೇರುಗಳು ಸುಮಾರು $40 USDಗಳಿಗೆ NASDAQನಲ್ಲಿ ಮಾರಾಟವಾಗುತ್ತಿದ್ದವು.[೧೯] ಮಾರ್ಚ್ 2008ರಲ್ಲಿ, ಅಡೋಬ್ ಮಾರುಕಟ್ಟೆಯ ಹೂಡಿಕೆ ಅಂದಾಜು $18 ಬಿಲಿಯನ್ USDಗಳಷ್ಟಿತ್ತು; ಸುಮಾರು 27 P/E ಪ್ರಮಾಣದ ಮತ್ತು ಸುಮಾರು $1.21ರಷ್ಟು EPS ಜೊತೆಯಲ್ಲಿ ಅದರ ಶೇರುಗಳು ಸುಮಾರು $40 USDಗಳಿಗೆ NASDAQ ನಲ್ಲಿ ಮಾರಾಟವಾಗುತ್ತಿದ್ದವು.[೧೯]
2000s
|
1990s
|
ಅಡೋಬ್ನ ಹಣಕಾಸು ವರ್ಷ ಪ್ರಾರಂಭವಾಗುವುದು ಡಿಸೆಂಬರ್ನಿಂದ ನವೆಂಬರ್ವರೆಗೆ. ಉದಾಹರಣೆಗೆ, 2007ರ ಹಣಕಾಸು ವರ್ಷ ಅಂತ್ಯಗೊಂಡಿದ್ದು ನವೆಂಬರ್ 30, 2007.
1995ರಿಂದಲೂ, ಅಡೋಬ್ ಕಾರ್ಯನಿರ್ವಹಿಸಲು ಅತ್ಯಂತ ಉತ್ಕೃಷ್ಟವಾದ ಕಂಪನಿ ಎಂದು Fortune ಪ್ರಕಟಿಸಿದೆ.
ಕಾರ್ಯನಿರ್ವಹಿಸಲು ಅಮೆರಿಕನ್ ಕಂಪನಿಗಳಲ್ಲಿ ಅಡೋಬ್ ಕಂಪನಿಯನ್ನು 2003ರಲ್ಲಿ ಐದನೆಯ , 2004ರಲ್ಲಿ ಆರನೆಯ, 2007ರಲ್ಲಿ 31ನೆಯ ,2008ರಲ್ಲಿ 40ನೆಯ ಹಾಗೂ 2009ರಲ್ಲಿ ಹನ್ನೊಂದನೆಯ ಉತ್ತಮ ಕಂಪನಿಯೆಂದು ಆಯ್ಕೆಮಾಡಲಾಗಿದೆ.[೨೮]
ಮೇ 2008ರಲ್ಲಿ, ಅಡೋಬ್ ಸಿಸ್ಟಮ್ಸ್ ಇಂಡಿಯಾವು ಕೆಲಸ ಮಾಡಲು 19ನೆಯ ಮಹತ್ವದ ಸ್ಥಳ ಎಂಬ ದರ್ಜೆಪಡೆಯಿತು.[೨೯] ಅಕ್ಟೋಬರ್ 2008ರಲ್ಲಿ, ಅಡೋಬ್ ಸಿಸ್ಟಮ್ಸ್ ಕೆನಡಾ Inc. ಇದು "Canada's Top 100 Employers" ಎಂದು ಮೀಡಿಯಾ ಕಾರ್ಪ್ ಕೆನಡಾ Inc.ನಿಂದ ಹೆಗ್ಗಳಿಕೆಗೆ ಪಾತ್ರವಾಯಿತು, ಹಾಗೂ ಅದನ್ನು Maclean's ವಾರ್ತಾಪತ್ರಿಕೆಯಲ್ಲಿ ವರ್ಣಿಸಲಾಯಿತು.[೩೦]
ಅಡೋಬ್ ತನ್ನ ಉತ್ಪನ್ನಗಳಿಗೆ [೩೧][೩೨][೩೩] ವಿಧಿಸುವ ಬೆಲೆಯ ರೂಡಿಗಳಿಂದಾಗಿ ಟೀಕೆಗಳಿಗೆ ಗುರಿಯಾಗುತ್ತಲೇ ಇರುತ್ತದೆ, ದೇಶೀಯ ಮಾರುಕಟ್ಟೆಗಿಂತ ವಿದೇಶಗಳಲ್ಲಿ ಬೆಲೆಯು [೩೪] ಎರಡುಪಟ್ಟಿಗಿಂತ ಹೆಚ್ಚಾಗಿರುತ್ತದೆ. ಜೂನ್ 2009ರಲ್ಲಿ, ಅಡೋಬ್ ತನ್ನ ಬೆಲೆಗಳನ್ನು UK ಯಲ್ಲಿ 10%ಏರಿಸಿದೆ.[೩೫]
{{cite web}}
: Cite has empty unknown parameters: |month=
and |coauthors=
(help)
{{cite web}}
: CS1 maint: bot: original URL status unknown (link)