ಜಿಮ್ಮಿ ವೇಲ್ಸ್

ಜಿಮ್ಮಿ ವೇಲ್ಸ್
ಡಿಸೆಂಬರ್ ೨೦೦೮ರಲ್ಲಿ ವೇಲ್ಸ್
ಜನನ
ಜಿಮ್ಮಿ ಡೊನಾಲ್ ವೇಲ್ಸ್

(1966-08-07) ಆಗಸ್ಟ್ ೭, ೧೯೬೬ (ವಯಸ್ಸು ೫೭)
ರಾಷ್ಟ್ರೀಯತೆಅಮೆರಿಕ ಸಂಯುಕ್ತ ಸಂಸ್ಥಾನ
ಇತರೆ ಹೆಸರುಜಿಂಬೊ
ಶಿಕ್ಷಣ ಸಂಸ್ಥೆಆಬನ್೯ ವಿಶ್ವವಿದ್ಯಾನಿಲಯ, ಅಲಬಾಮಾ ವಿಶ್ವವಿದ್ಯಾನಿಲಯ, ಇಂಡಿಯಾನಾ ವಿಶ್ವವಿದ್ಯಾನಿಲಯ ಬ್ಲೂಮಿಂಗ್‌ಟನ್
ವೃತ್ತಿ(ಗಳು)ಹೂಡಿಕೆ ಬ್ಯಾಂಕರ್, ಅಂತಜಾ೯ಲ ಉದ್ಯಮಿ
Known forವಿಕಿಪೀಡಿಯ ಸಹ-ಸ್ಥಾಪನೆ
ಜಾಲತಾಣjimmywales.com
Signature

ಜಿಮ್ಮಿ ವೇಲ್ಸ್ (ಜನನ:೧೯೬೬) - ಅಮೆರಿಕಾದ ಅಂತರಜಾಲ ಉದ್ಯಮಿ ಹಾಗೂ ವಿಕಿಪೀಡಿಯದ ಸಹ-ಸ್ಥಾಪಕ ಮತ್ತು ಪ್ರವತ೯ಕ.

2001 ರಲ್ಲಿ, ಲ್ಯಾರಿ ಸ್ಯಾಂಗರ್ ಮತ್ತು ಇತರರೊಂದಿಗೆ, ವೇಲ್ಸ್ ವಿಕಿಪೀಡಿಯವನ್ನು ಆರಂಭಿಸಿದರು, ಒಂದು ಉಚಿತ ಮತ್ತು ಸ್ವತಂತ್ರ ವಿಶ್ವಕೋಶ.

ಆರಂಭಿಕ ಜೀವನ ಮತ್ತು ಶಿಕ್ಷಣ

ವೇಲ್ಸ್ ಹುಟ್ಟಿದ್ದು ಅಮೇರಿಕಾದ ಅಲಬಾಮಾಹಂಟ್ಸ್‌ವಿಲ್ಲೆಯಲ್ಲಿ. ವೇಲ್ಸ್ ಅಮೆರಿಕ ಸಂಯುಕ್ತ ಸಂಸ್ಥಾನದ ಅಲಬಾಮಾ ರಾಜ್ಯದ ಹಂಟ್ಸ್‌ವಿಲ್ಲೆ ಎಂಬಲ್ಲಿ ಜನಿಸಿದರು.ವೇಲ್ಸ್ ಆಬರ್ನ್ ವಿಶ್ವವಿದ್ಯಾಲಯ ಮತ್ತು ಅಲಬಾಮಾ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಮತ್ತು ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು.[೧][೨]

ವೃತ್ತಿ

ಚಿಕಾಗೊ ಆಪ್ಷನ್ಸ್ ಅಸೋಸೀಯೇಟ್ಸ್ ಮತ್ತು ಬೊಮಿಸ್

೧೯೯೪ರಲ್ಲಿ ಜಿಮ್ಮಿ ವೇಲ್ಸ್ ಕೆಲಸಕ್ಕಾಗಿ ಚಿಕಾಗೊ ಆಪ್ಷನ್ಸ್ ಅಸೋಸೀಯೇಟ್ಸ್ ಸೇರಿಕೊಂಡರು. ಅಂತರ್ಜಾಲದ ಪ್ರಭಾವಕ್ಕೊಳಗಾದ ನಂತರ, ಜಿಮ್ಮಿ ವೇಲ್ಸ್ ಚಿಕಾಗೊ ಆಪ್ಷನ್ಸ್ ಅಸೋಸೀಯೇಟ್ಸ್ ಕಂಪನಿಯನ್ನು ತೊರೆದರು ಹಾಗೂ ೧೯೯೬ರಲ್ಲಿ ತಮ್ಮ ಸ್ನೇಹಿತರೊಂದಿಗೆ ಬೊಮಿಸ್ ಎಂಬ ಸ್ವಂತ ಕಂಪನಿಯನ್ನು ಪ್ರಾರಂಭಿಸಿದರು.

2000 ರಲ್ಲಿ ಬೊಮಿಸ್

ನುಪೀಡಿಯಾ

ಬೊಮಿಸ್ ಕಂಪನಿಯಿಂದ ಆದ ಸ್ವಲ್ಪ ಲಾಭದಿಂದ ಒಂದು ಸ್ವತಂತ್ರ ವಿಶ್ವಕೋಶ ನಿರ್ಮಿಸಲು ಉತ್ತೇಜನ ಸಿಕ್ಕಿತು. 1990 ರ ದಶಕದ ಆರಂಭ ವೇಲ್ಸ್ ಅಂತರ್ಜಾಲ ಚರ್ಚೆಯಲ್ಲಿ ಲ್ಯಾರಿ ಸ್ಯಾಂಗರ್ ಅವರನ್ನು ಭೇಟಿಯಾದರು. ಅಂತರ್ಜಾಲದಲ್ಲಿ ವಿವರವಾದ ಚರ್ಚೆಯ ನಂತರ ವೇಲ್ಸ್ ಮತ್ತು ಸ್ಯಾಂಗರ್ ಸ್ನೇಹಿತರಾದರು. ಅಂತಿಮವಾಗಿ ವೇಲ್ಸ್ ತಮ್ಮ ವಿಶ್ವಕೋಶದ ಕನಸನ್ನು ಮುಂದುವರಿಸಲು ನಿರ್ಧರಿಸಿದರು, ಆದ ಕಾರಣ ಈ ಯೋಜನೆಗಾಗಿ ವೇಲ್ಸ್ ಸ್ಯಾಂಗರ್ ರವರನ್ನು ನೇಮಿಸಿಕೊಂಡರು ಹಾಗೂ ನುಪೀಡಿಯಾ ಎಂಬ ಹೆಸರಿನಿಂದ ೨೦೦೦ರಲ್ಲಿ ವಿಶ್ವಕೋಶ ಪ್ರಾರಂಭವಾಯಿತು.

ನೂಪೆಡಿಯಾ ಲೋಗೋ

ವಿಕಿಪೀಡಿಯ

ನುಪೀಡಿಯಾದಲ್ಲಿ ಲೇಖನಗಳ ಸಂಖ್ಯೆ ಕಡಿಮೆ ಇತ್ತು ಏಕೆಂದರೆ ರಚಿಸಬೇಕಾದ ಪ್ರತಿಯೊಂದು ಲೇಖನಕ್ಕೂ ಸಾಕಷ್ಟು ವಿಮರ್ಶೆಯ ಅಗತ್ಯವಿತ್ತು, ಆದುದರಿಂದ ವೇಲ್ಸ್ ಮತ್ತು ಸ್ಯಾಂಗರ್ ಇನ್ನೊಂದು ವಿಶ್ವಕೋಶವನ್ನು ೨೦೦೧ರಲ್ಲಿ ವಿಕಿಪೀಡಿಯ ಎಂಬ ಹೆಸರಿನಿಂದ ಪ್ರಾರಂಭ ಮಾಡಿದರು. ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ, ವಿಕಿಪೀಡಿಯಾದಲ್ಲಿನ ಲೇಖನಗಳ ಸಂಖ್ಯೆ ನುಪೀಡಿಯಾಕ್ಕಿಂತ ಹೆಚ್ಚಾಯಿತು ಏಕೆಂದರೆ ಮುಕ್ತತೆಯ ವಿಕಿಪೀಡಿಯಾದ ಮೂಲ ತತ್ವದಿಂದಾಗಿ ಯಾರಾದರೂ ಲೇಖನಗಳನ್ನು ಸಂಪಾದಿಸಬಹುದು.

ವಿಕಿಮೀಡಿಯ ಪ್ರತಿಷ್ಠಾನ

2003 ರಲ್ಲಿ, ವೇಲ್ಸ್ ವಿಕಿಮೀಡಿಯ ಪ್ರತಿಷ್ಠಾನ ಸ್ಥಾಪಿಸಿದರು. ಈ ಲಾಭೋದ್ದೇಶವಿಲ್ಲದ ಸಂಸ್ಥೆಯು ಸೇಂಟ್ ಪೀಟರ್ಸ್ಬರ್ಗ್, ಫ್ಲೋರಿಡಾದಲ್ಲಿ ಸ್ಥಾಪನೆಯಾಯಿತು ಮತ್ತು ನಂತರ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಛೇರಿಯನ್ನು ಸ್ಥಳಾಂತರಿಸಲಾಯಿತು.

ವಿಕಿಯಾ ಮತ್ತು ಮುಂತಾದವು

2004 ರಲ್ಲಿ, ವೇಲ್ಸ್ ಮತ್ತು ವಿಕಿಮೀಡಿಯ ಪ್ರತಿಷ್ಠಾನದ ಬೋರ್ಡಿನ ಟ್ರಸ್ಟಿ ಏಂಜೆಲಾ ಬೀಸ್ಲಿ ಜೊತೆಗೆ ವಿಕಿಯಾ ಕಂಪನಿಯನ್ನು ಸ್ಥಾಪಿಸಿದರು.

ವೈಯಕ್ತಿಕ ಜೀವನ

ಜಿಮ್ಮಿ ವೇಲ್ಸ್ ಮೂರು ಬಾರಿ ವಿವಾಹವಾಗಿದ್ದಾರೆ. ಇಪ್ಪತ್ತನೆಯ ವಯಸ್ಸಿನಲ್ಲಿ, ಅವರು ಪಮೇಲಾ ಗ್ರೀನ್ ಅವರನ್ನು ವಿವಾಹವಾದರು ಹಾಗೂ ೧೯೯೩ರಲ್ಲಿ ವಿಚ್ಛೇದನ ಪಡೆದರು. ಅವರು ತಮ್ಮ ಎರಡನೇ ಪತ್ನಿ ಕ್ರಿಸ್ಟೀನ್ ರೋಹನ್ ಅವರನ್ನು ಚಿಕಾಗೋದಲ್ಲಿರುವ ಸ್ನೇಹಿತರ ಮೂಲಕ ಭೇಟಿಯಾದರು ಹಾಗೂ ಮಾರ್ಚ್ 1997 ರಲ್ಲಿ ಫ್ಲೋರಿಡಾದ ಮನ್ರೋ ಕೌಂಟಿಯಲ್ಲಿ ಇಬ್ಬರು ವಿವಾಹವಾದರು. ವೇಲ್ಸ್ ಮತ್ತು ಕ್ರಿಸ್ಟೀನ್ 2008 ರಲ್ಲಿ ವಿಚ್ಛೇದನ ಪಡೆದರು.

ವೇಲ್ಸ್ ಲಂಡನ್‌ನ ವೆಸ್ಲಿಯ ಚಾಪೆಲ್‌ನಲ್ಲಿ ಕೇಟ್ ಗಾರ್ವಿಯನ್ನು ಅಕ್ಟೋಬರ್ 6, 2012 ರಂದು ವಿವಾಹವಾದರು. ವೇಲ್ಸ್‌ಗೆ ಮೂವರು ಹೆಣ್ಣು ಮಕ್ಕಳಿದ್ದಾರೆ: ಒಬ್ಬರು ರೋಹನ್ ಮತ್ತು ಇಬ್ಬರು ಗಾರ್ವೆಯೊಂದಿಗೆ.

ವೇಲ್ಸ್ 2012 ರಿಂದ ಇಂಗ್ಲೆಂಡ್‌ನ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು 2019 ರಲ್ಲಿ ಬ್ರಿಟಿಷ್ ಪ್ರಜೆಯಾದರು.[೩]

ಪ್ರಶಸ್ತಿಗಳು ಮತ್ತು ಗೌರವ ಪದವಿಗಳು

  • "ಪ್ರಪಂಚದ ಅತಿದೊಡ್ಡ ಉಚಿತ ಆನ್‌ಲೈನ್ ವಿಶ್ವಕೋಶವಾದ ವಿಕಿಪೀಡಿಯಾವನ್ನು ರಚಿಸುವ ಮತ್ತು ಅಭಿವೃದ್ಧಿಪಡಿಸುವ ಮೂಲಕ ಅವರ ಕೆಲಸದ ಮೂಲಕ ಮಾಹಿತಿಯ ಹರಡುವಿಕೆಯನ್ನು ಸುಗಮಗೊಳಿಸಿದ್ದಕ್ಕಾಗಿ" ಸೆಪ್ಟೆಂಬರ್ 2017 ರಲ್ಲಿ, ಅವರಿಗೆ ಬ್ರಿಟಿಷ್ ಅಕಾಡೆಮಿಯ ಅಧ್ಯಕ್ಷರ ಪದಕವನ್ನು ನೀಡಲಾಯಿತು.
  • ಜನವರಿ 2015 ರಲ್ಲಿ, ಮಾಸ್ಟ್ರಿಚ್ ವಿಶ್ವವಿದ್ಯಾಲಯವು ವೇಲ್ಸ್‌ಗೆ ಗೌರವ ಡಾಕ್ಟರೇಟ್ ಪದವಿವನ್ನು ನೀಡಿತು.
೨೦೧೫ರಲ್ಲಿ ವೇಲ್ಸ್ ಮಾಸ್ಟ್ರಿಚ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವುದು

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

  1. "Jimmy Wales". Britannica. 4 August 2021.
  2. "Q&A with Jimmy Wales". C-SPAN. 25 September 2005.
  3. Jimmy Wales (17 September 2019). "I just became a UK citizen, quite happy about that. It occurs to me that perhaps a few MPs should actually take the "Life in the UK" test and study the manual!".